Site icon Ullalavani

ಯಾವ ಅಭಿವೃದ್ಧಿ ಕಾಮಗಾರಿಯಡಿಯಲ್ಲಿ ಕಾಂಗ್ರೆಸ್ಸಿಗರು ಮತ ಕೇಳುತ್ತಾರೆ : ಕೋಟಾ ಶ್ರೀನಿವಾಸ ಪೂಜಾರಿ

UN NETWORKS

ಉಳ್ಳಾಲ: ಒಳಚರಂಡಿ ವ್ಯವಸ್ಥೆ ಮೂಲಕ ಉಳ್ಳಾಲ ನಗರಸಭೆಯ ವ್ಯಾಪ್ತಿಯಲ್ಲಿಜನರಿಗೆ ನೆಮ್ಮದಿ ಕರುಣಿಸುತ್ತೇವೆ ಎಂದು ಕಾಂಗ್ರೆಸ್ ಆಡಳಿತ ಬಾಯಿ ಮಾತಿನಲ್ಲೇ ಹೇಳಿದ್ದೇ ಬಿಟ್ಟರೆ ಈ ತನಕ ಅದು ಅನುಷ್ಠಾನವಾಗಿಲ್ಲ. ಬಹು ನಿರೀಕೆಯ ಶಾಶ್ವತ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಎಡಿಬಿ ಯೋಜನೆಯಡಿಯಲ್ಲಿಜಾರಿಗೆ ತಂದಿರುವ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಹಾಗಿದ್ದ ಮೇಲೆ ಕಾಂಗ್ರೆಸ್ಸಿಗರು ಯಾವ ಸಾಧನೆಯ ಆಧಾರದಲ್ಲಿ ಮತ ಕೇಳಲು ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವೇ ಜಾರಿಗೆ ತಂದಿರುವ ಯೋಜನೆ ಅನುಷ್ಠಾನವಾಗಿಲ್ಲ. ನಗರ ಯೋಜನೆಯಲ್ಲಿ ಆಶ್ರಯ ಯೋಜನೆ ಮನೆಗಳು ಮನುಷ್ಯರು ವಾಸಿಸಲು ಯೋಗ್ಯವಾ ಎಂಬ ಪ್ರಶ್ನೆ ಜನರು ಕೇಳಬೇಕು. ಎಡಿಬಿ ಯೋಜನೆಯ ಯಾವುದೇ ಕಾಮಗಾರಿ ತುದಿ ಮುಟ್ಟಿಲ್ಲ. ತುಂಬೆ ವೆಂಟೆಡ್ ಡ್ಯಾಂನಿಂದ ಗ್ರಾಮಗಳಿಗಂತಲೂ ಕನಿಷ್ಠ 15ರಿಂದ 20ವಾರ್ಡ್ ಗೆ ನೀರು ಸರಬರಾಜು ಮಾಡಲು ಸಧ್ಯವಾಗಿಲ್ಲ. ಸ್ವಚ್ಛ ಭಾರತ ಯೋಜನೆಯಡಿಯಲ್ಲಿಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದರೂ ಉಳ್ಳಾಲದಲ್ಲಿ ಪೂರ್ಣ ಪ್ರಮಾಣದ ಒಂದು ತ್ಯಾಜ್ಯ ಘಟಕ ಇದುವರೆಗೆ ಸ್ಥಾಪಿಸಿಲ್ಲ ಎಂದು ಆರೋಪಿಸಿದರು.

ವಸತಿ ಯೋಜನೆಯಡಿಯಲ್ಲಿಬಡವರಿಗೆ ಕೊಡುವಂತಹ ಯಾವುದೇ ಯೋಜನೆ ಮಂಜೂರಾಗಿಲ್ಲ. ಮೀನು ಮಾರುಕಟ್ಟೆಯ ನಿರ್ಮಾಣವೂ ಆಗಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ. 390ಅಶ್ರಯ ಮನೆಗಳು ಮನುಷ್ಯರು ವಾಸಿಸಲು ಯೋಗ್ಯವಾಗಿಲ್ಲ. ಕಳೆದ 30ವರ್ಷಗಳಿಂದ ಉಳ್ಳಾಲದಲ್ಲಿ ಆಡಳಿತ ನಡೆಸಿದವರು ಸಾಧಿಸಿದ್ದಾದರೂ ಏನು? ಹಾಗಾಗಿ ಈ ಬಾರಿಯ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿಯ ಕನಿಷ್ಠ 20ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟರೆ ಸುಂದರ ಉಳ್ಳಾಲ ನಿರ್ಮಿಸಿಕೊಡುತ್ತೇವೆ ಎಂದರು.
ಜನರು ಸರಕಾರ, ಸ್ಥಳೀಯ ಆಡಳಿತ, ಯು.ಟಿ. ಖಾದರ್ ಸಹಿತ ಸರಕಾರ ಎಲ್ಲಿ ವಿಫಲವಾಗಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿ.
ನಗರಾಡಳಿತಕ್ಕೆ ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದರೂ ಅದರ ಅನುಷ್ಠಾನವೇ ಆಗುತ್ತಿಲ್ಲ. ನಗರಾಡಳಿತ ಸಂಬಂಧಪಟ್ಟಂತೆ ಸರಕಾರದಿಂದ ಮಂಜೂರಾಗುವ ಯೋಜನೆ ಅನುಷ್ಠಾನಕ್ಕೆ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ ಎಂದಾದರೆ ಯಾವ ಆಧಾರದಲ್ಲಿ ಕಾಂಗ್ರೆಸ್ಸಿಗರು ಮತ ಕೇಳಲು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಡಿಯಲ್ಲಿಕರ್ನಾಟಕದ ಏಳು ಜಿಲ್ಲೆಗಳಿಗೆ ಕೇಂದ್ರ ಸರಕಾರ ತಲಾ 500ಕೋಟಿ ರೂ. ಗಳಂತೆ ಮಂಗಳೂರಿಗೂ 500ಕೋಟಿ ರೂ. ಗಳನ್ನು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದರೂ ಮಂಗಳೂರು ನಗರಾಡಳಿತ ಕನಿಷ್ಠ 25ಲಕ್ಷ  ರೂ. ಕಾಮಗಾರಿ ನಡೆಸಿಲ್ಲ. ಕ್ರಿಯಾ ಯೋಜನೆಯೇ ಸಮರ್ಪಕವಾಗಿಲ್ಲ. ಕೇಂದ್ರವಾಗಲೀ ರಾಜ್ಯ ಸರಕಾರವಾಗಲೀ ಅನುದಾನ ಮಂಜೂರು ಮಾಡಿದಾಗ ಅದರ ಅನುಷ್ಠಾನ ಮಾಡುವಷ್ಟು ಶಕ್ತಿ ನಗರಾಡಳಿತಕ್ಕೆ ಇಲ್ಲದಿದ್ದರೆ ಯಾಕೆ ಆಡಳಿತ ಮಾಡುತ್ತೀರಿ ಎಂದು ಕೇಳಿದರು.

ಉಳ್ಳಾಲ ನಗರಸಭೆಯಲ್ಲಿ ಕನಿಷ್ಠ 16ಸೀಟು ಗೆದ್ದರೂ ನಮಗೆ ಸಾಕು. ಕೆಲವು ಅಭ್ಯರ್ಥಿಗಳು ಮಾಡಿರುವ ಪರಿಸ್ಥಿತಿ, ಮಾನಸಿಕ ಸ್ಥಿತಿ, ಇಲ್ಲಿನ ರಾಜಕೀಯ ಅರ್ಥಮಾಡಿಕೊಂಡು ಇಲ್ಲಿ ಬಿಜೆಪಿಗೆ ಸೂಕ್ತ ವಾರ್ಡ್‍ನಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿಗೆ ಮೈತ್ರಿ ಸಾಧ್ಯತೆ ಇಲ್ಲ. ಸ್ಪಷ್ಟವಾದ ಬಹುಮತ ಬಂದರೆ ಸಾಧ್ಯತೆ ಉದ್ಭವಿಸದು. ಕಾಂಗ್ರೆಸ್ ಗೆಲ್ಲಿಸಲು ಜೆಡಿಎಸ್ ಸಹಕರಿಸಬಹುದು. ಕಳೆದ ಬಾರಿ ಕೆಎರ್ಫಡಿ ಹಿಂತೆಗೆದಿರುವುದನ್ನು ಜನತೆ ಗಮನಿಸಿದ್ದಾರೆ. ರಾಜ್ಯ ಸರಕಾರದಲ್ಲಿ ಕುಮಾರಸ್ವಾಮಿವರಿಗೆ ಕಾಂಗ್ರೆಸ್ ಮೇಲಿನ  ಇರುವುದರಿಂದ ಕುಮಾರಸ್ವಾಮಿಯವರು ಸಾಂದರ್ಭಿಕ ಶಿಶುವಾಗಿರುವುದರಿಂದ ಅವರ ನಡುವೆ ಏನೂ ನಡೆಯಬಹುದು ಎಂದರು.

ಸುದಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಅಭ್ಯರ್ಥಿ ಹರಿಯಪ್ಪ ಸಾಲ್ಯಾನ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್‍ರಾಜ್ ಕೆ.ಆರ್ ಉಪಸ್ಥಿತರಿದ್ದರು.

Exit mobile version