Site icon Ullalavani

ದಂಪತಿಗೆ ಹಲ್ಲೆ ಪ್ರಕರಣ ಪತಿ ಮೃತ್ಯು, ಕೊಲೆ ಪ್ರಕರಣ ದಾಖಲು

UN NETWORKS

ಉಳ್ಳಾಲ: ತನ್ನನ್ನು ಸಹೋದರಿ ಮತ್ತು ಆಕೆಯ ಪತಿ ಸರಿಯಾಗಿ ನೋಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಿರಿಯ ನಾಗರಿಕನೋರ್ವ ದಂಪತಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೊಕ್ಕೊಟ್ಟು ಕಾಪಿಕಾಡು ನಿವಾಸಿ ಜೋಸೆಫ್ ಡಿಸೋಜ (64) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕೊಲೆಯತ್ನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರ ಪತ್ನಿ ಜಾನೆಟ್ ಡಿಸೋಜ ಗೆ ಚಿಕಿತ್ಸೆ ಮುಂದುವರಿದಿದ್ದು, ಆಕ ಚೇತರಿಸಿಕೊಳ್ಳುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ. ಆ.8 ರಂದು ಕಾಪಿಕಾಡಿನ ಮನೆಯಲ್ಲಿ ದಂಪತಿ ಮಲಗಿದ್ದ ಸಂದರ್ಭ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಜಾನೆಟ್ ಅವರ ಹಿರಿಯ ಸಹೋದರ ಡೆನಿಸ್ (78) ಅವರು ಕಬ್ಬಿಣದ ರಾಡಿನಲ್ಲಿ ದಂಪತಿ ತಲೆಗೆ ಹೊಡೆದಿದ್ದರು.

ಇಬ್ಬರ ಬೊಬ್ಬಿಡುವ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಜಾನೆಟ್ ಅವರ ಕಿರಿಯ ಸಹೋದರ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿ ಡೆನಿಸ್ ಮಾತ್ರ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ತಾನು ನಡೆಸಿರುವ ಕೃತ್ಯವನ್ನು ಒಪ್ಪಿಕೊಂಡಿದ್ದರು. ಪೊಲೀಸರು ಡೆನಿಸ್ ಅವರನ್ನು ಬಂಧಿಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

Exit mobile version