Site icon Ullalavani

ಕೈರಂಗಳ: ಶಾರದಾಗಣಪತಿ ವಿದ್ಯಾಕೇಂದ್ರದಿಂದ ಕೊಡಗಿಗೆ ನೀರು ಪೂರೈಕೆ

UN NETWORKS

ಕೈರಂಗಳ: ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರ ಮತ್ತು ಸ್ಥಳೀಯ ಸಂಘಟನೆಗಳ ಸಹಕಾರದಿಂದ ಕೊಡಗು ನೆರೆಸಂತ್ರಸ್ತ್ರರಿಗೆ ಶುದ್ಧ ಕುಡಿಯುವ ನೀರು ಕಳುಹಿಸಿಕೊಡಲಾಯಿತು.

ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ.ರಾಜಾರಾಮ ಭಟ್ ಅವರು ಮಾತನಾಡಿ, ನೆರೆಸಂತ್ರಸ್ತರಿಗೆ ಕುಡಿಯುವ ನೀರಿನ ಅವಶ್ಯಕತೆ ಇದ್ದುದರ ಬಗ್ಗೆ ಅರಿತುಕೊಂಡು ಸ್ಥಳೀಯ ಅನೇಕ ಸಂಘಟನೆಗಳು ಒಟ್ಟು ಸೇರಿ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಿದ್ದು ಶಾಲಾ ವಿದ್ಯಾರ್ಥಿಗಳ ಪರಿಶ್ರಮದಿಂದ ಕೊಡಗಿನ ಕಲ್ಲಗುಂಡಿ, ಸಂಪಾಜೆ, ಅರಂತೋಡು ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಪ್ರಾಕೃತಿಕ ವಿಕೋಪಗಳು ನಡೆದಾಗ ಸಾಂಕ್ರಾಮಿಕ ರೋಗಗಳು ಹರಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿದ್ದು ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಶುದ್ದ ಕುಡಿಯುವ ನೀರು ಸಂಜೀವಿನಿಯಾಗಲಿದೆ. ಸಮಾಜದ ಕಷ್ಟಗಳಿಗೆ ಎಂದಿಗೂ ಸ್ಪಂದಿಸಲು ನಾವುಗಳು ಸಿದ್ದ ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ದಿವ್ಯದೀಪ, ಉಪನ್ಯಾಸಕರಾದ ಶ್ರೀಹರಿ, ಸೋಮಶೇಖರ್, ಯೋಗಿತ, ಸ್ಥಳೀಯ ಮುಖಂಡರಾದ ವಿಜೇಶ್ ನಾಯ್ಕ್, ಜಯಂತ್ ಪಾದಲ್ಪಾಡಿ, ಉದಯ ಪಾದಲ್ಪಾಡಿ, ಸಂತೋಷ್, ಸುಖೇಶ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

Exit mobile version