Site icon Ullalavani

ತೊಕ್ಕೊಟ್ಟು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆ

UN NETWORKS

ತೊಕ್ಕೊಟ್ಟು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತೊಕ್ಕೊಟ್ಟುವಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಇದರ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಾಮಸ್ಕೃತಿ ಸ್ಪರ್ಧೆಗಳಿಗೆ ಪುಟಾಣಿಗಳಾದ ಜೇಷ್ಠ ಕಾಶಿಯಪ್ಪ ಪಂಚಮಿ ಕೆ. ಪಂಚಮಿ ಕೆ., ಧನ್ಯ, ಅಲಿಷ್ಕಾ, ಧ್ಯಾನ್ ಕೃಷ್ಣನನಗರ ಉದ್ಘಾಟಿಸಿದರು.

ತೀರ್ಪುಗಾರರಾಗಿ ಛೋಟಾ ಮಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಕೆ.ಸಿ. ನಾರಾಯಣ ಸೋಮೇಶ್ವರ, ಸಮಾಜಿಕ ಕಾರ್ಯಕರ್ತ ಯಶವಂತ ಬೀರಿ, ಉಚ್ಚಿಲಗುಡ್ಡೆ ಶಾಲೆಯ ನಿವೃತ್ತ ಶಿಕ್ಷಕ ರಾಮಕೃಷ್ಣ, ಜಗದೀಶ್ ಬೆಳ್ಳಾರೆ, ದಿವ್ಯ ಕೊಟ್ಟಾರಿ ಮಂಗಳಾದೇವಿ, ಸಚಿನ್ ಜೈನ್ ತೊಕ್ಕೊಟ್ಟು, ಹರೀಶ್ ಚೌಟ ಮಂಜೇಶ್ವರ, ರಾಜ್ ಮೋಹನ್ ಕುಂಪಲ, ರಮಣಿ ಹರಿದಾಸ್ ಸೋಮೇಶ್ವರ, ಕಲಾವಿದ ಜೆ.ಪಿ. ಕೋಟೆಕಾರ್, ಲಲಿತಾ ಗಾಂಧಿನಗರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಚಂದ್ರಕಾಂತ್, ಅಶೋಕ್ ಕ್ಲಿಕ್ ತೊಕ್ಕೊಟ್ಟು, ಪ್ರವೀಣ್ ಟಾಪ ಸಿಂಪೋನಿ, ವಿಶ್ವನಾಥ್ ಅಟ್ಟೊಳಿಗೆ ಕಿರಣ್ ಚೆಂಬುಗುಡ್ಡೆ, ಶರತ್ ಬಂಗೇರ ಉಪಸ್ಥಿತರಿದ್ದರು.

Exit mobile version