Site icon Ullalavani

ಆಶ್ರಮ ವಾಸಿಗಳ ಜತೆ ಹಬ್ಬ ಆಚರಿಸಿದ ಸಚಿವ ಖಾದರ್

UN NETWORKS

ಉಳ್ಳಾಲ: ಹಬ್ಬದ ಸಂತೋಷವನ್ನು ಎಲ್ಲರೂ ಆಚರಿಸಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಪ್ರತಿವರ್ಷವೂ ಸಂಘಟನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಹೆಲ್ಪ್ ಇಂಡಿಯಾ ಫೌಂಡೇಷನ್ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮೇಶ್ವರ ನೆಹರುನಗರದಲ್ಲಿರುವ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ಆಶ್ರಮ ವಾಸಿಗಳ ಜೊತೆಗೆ ಹಬ್ಬದ ಊಟ ಕಾರ್ಯಕ್ರಮದಲ್ಲಿ ಊಟ ವಿತರಿಸಿ ಮಾತನಾಡಿದರು. ಎಲ್ಲ ಕೂಡಿಕೊಂಡು ಹಬ್ಬವನ್ನು ಆಚರಿಸುವ ಮೂಲಕ ಸಮಾಜದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಬೇಕಿದೆ.

ಸೌಹಾರ್ದತೆಯನ್ನು ಕಾಪಾಡಲು ಹಬ್ಬಗಳು ಸಹಕಾರಿ. ತಾವು ಎಲ್ಲಿದ್ದೇವೆ ಅನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕವಾಗಿ ಸದೃಢತೆಯನ್ನು ಹೊಂದಬಹುದು. ಹೆಲ್ಪ್ ಇಂಡಿಯಾ ಫೌಂಡೇಶನ್ ನ ಸೇವಾ ಕಾರ್ಯ ಎಲ್ಲರಿಗೂ ಸ್ಫೂರ್ತಿ ಎಂದರು.

ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದಲೂ ನಿರಾಶ್ರಿತರಿಗೆ ತಾಣ ಮಾಡುವ ಯೋಜನೆಯನ್ನು ಇಟ್ಟುಕೊಂಡಿದೆ. ಸಮಾಜದಲ್ಲಿ ಹೆಚ್ಚಿನ ಮಂದಿ ನಿರಾಶ್ರಿತರಾಗಿಯೇ ದಾರಿಬದಿಯಲ್ಲಿ ಸಾಯುವಂತಹ ಸ್ಥಿತಿಯಿದೆ. ಇದನ್ನು ಗಣನೆಗೆ ಪಡೆದುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ಆಶ್ರಮದಲ್ಲಿರುವವರು ರೋಗಿಗಳೆಂದು ಭಾವಿಸದೆ ಗುಣಮುಖರಾಗಿ ಎಲ್ಲರೂ ವಾಪಸ್ಸು ಮನೆಗೆ ಹೋಗಬೇಕಿದೆ. ಇಂತಹ ಅನಾಥಾಲಯಗಳಲ್ಲಿ ಇರುವವರಿಗೆ ಸಂಘಟನೆಗಳ ಸಹಕಾರ ಅಗತ್ಯ ಬೇಕಿದೆ ಎಂದು ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಹೇಳಿದರು.

ಇಸ್ಮಾಯಿಲ್ ರಿಯಲ್ ಟೆಕ್, ಆಸಿಫ್ ಅಮೇಕೊ, ಉದ್ಯಮಿ ಅಬ್ದುಲ್ ಕಮಲ್, ಉದ್ಯಮಿ ಶಿವಪ್ರಕಾಶ್ ಶೆಟ್ಟಿ , ಸಿರಾಜ್ ಅಭಯಾ ಫ್ಯಾಶನ್, ಹೆಲ್ಪ್ ಇಂಡಿಯಾ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ, ತೌಸೀಫ್ ಯು.ಟಿ., ಜಲೀಲ್ ಜೆ.ಜೆ., ತನ್ವೀರ್ ಅಹಮದ್, ಝಾಕಿರ್ ಹುಸೈನ್, ಮುಸ್ತಫಾ ರಿಯಲ್ ಟೆಕ್, ಯು.ಪಿ. ಸುಲೈಮಾನ್, ಪಶ್ಚಿಮ್ ರಿಹಾಬ್ ಸೆಂಟರ್ ನ ರೋಹಿತ್,ಶಕೀಲ್ ತುಂಬೆಜ ಕಾರ್ಯಕ್ರಮ ನಿರೂಪಿಸಿದರು. ಅಹಮ್ಮದ್ ತಮೀಮ್ ಬಿನ್ ರಾಝಿಕ್ ಖಿರಾಅತ್ ಪಠಿಸಿದರು.

Exit mobile version