Site icon Ullalavani

ಸೆ.2ರಿಂದ 3ರ ವರೆಗೆ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ

UN NETWORKS

ತೊಕ್ಕೊಟ್ಟು: ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 58ನೇ ವರ್ಷದ ತೊಕ್ಕೋಟು ಮೊಸರು ಕುಡಿಕೆ ಉತ್ಸವ ಸೆ . 2 ರಿಂದ 3 ರವರೆಗೆ ತೊಕ್ಕೊಟ್ಟುವಿನಲ್ಲಿ ನಡೆಯಲಿದೆ.

ಸೆ.2 ರ ಭಾನುವಾರ ತಲಪಾಡಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ತಲಪಾಡಿ ಇವರಿಂದ ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಶ್ರೀ ಕೃಷ್ಣ ಬೆಳ್ಳಿ ಪ್ರತಿಮೆ ಪ್ರತಿಷ್ಠೆ ಸೆ.3 ರ ಬೆಳಿಗ್ಗೆ ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ಇವರಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಮಡಕೆ ಒಡೆಯುವ ಸ್ಪರ್ಧೆ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 6 ಗಂಟೆಗೆ ಅಡಿಕೆ ಮರ ಏರುವ ಸ್ಪರ್ಧೆ ಬಳಿಕ ಸಿಂಚನ ಮೆಲೋಡೀಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಬಳಿಕ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಸಂಜೆ 7.30 ರಿಂದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ತೊಕ್ಕೊಟ್ಟು ಅಂಬೇಡ್ಕರ್ ರಂಗ ಮಂದಿರಕ್ಕೆ ಶ್ರೀ ಕೃಷ್ಣ ಬೆಳ್ಳಿ ಪ್ರತಿಮೆಯ ಶೋಭಾಯಾತ್ರೆ ವಿಜೃಂಭಣೆಯಿಂದ ಜರಗಲಿದೆ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದೊಂದಿಗೆ ಸಂಭ್ರಮದಿಂದ ಆಚರಿಸುವ ಮೊಸರು ಕುಡಿಕೆ ಹಬ್ಬದ ಸಭಾ ಕಾರ್ಯಕ್ರಮವನ್ನು ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ವಿಶಾಲ್ ಹೆಗ್ಡೆ ಉದ್ಘಾಟಿಸಲಿದ್ದಾರೆ.

ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ್, ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ , ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ.ಮೋನು, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ನಗರಸಭೆ ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲದ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್, ಉಳ್ಳಾಲ್ದಿ ಧರ್ಮರಸ್ರ ಸ್ವರ್ಣಬಿಂಬ ಅಧ್ಯಕ್ಷ ಹರೀಶ್ ಕುತ್ತಾರ್, ನಗರಸಭೆ ಪೌರಾಯಕ್ತೆ ವಾಣಿ ಆಳ್ವ, ಸುರೇಶ್ ಭಟ್ನಗರ, ಸತೀಶ್ ಕರ್ಕೇರ, ಗೋಪಿನಾಥ್ ಕಾಪಿಕಾಡ್, ಕೆ.ಪಿ.ಸುರೇಶ್, ಯೋಗೀಶ್ ಅತ್ತಾವರ, ಪ್ರವೀಣ್ ಉಳ್ಳಾಲ್ ಬೈಲ್, ಪ್ರಕಾಶ್.ಜೆ.ಸಾಲ್ಯಾನ್, ಸಂತೋಷ್ ಕುಮಾರ್ ಕಾಪಿಕಾಡು, ಶ್ರೀಧರ್ ಉಳ್ಳಾಲ್ ಭಾಗವಹಿಸಲಿದ್ದಾರೆ ಎಂದು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಇದರ ಅಧ್ಯಕ್ಷ ದೇವದಾಸ್ ಶ್ರೀಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version