Site icon Ullalavani

ಕೊಣಾಜೆ : ಮಳೆಗೆ ಕುಸಿದು ಬಿದ್ದ ದನದ ಹಟ್ಟಿ

UN NETWORKS

ಕೊಣಾಜೆ: ಕೊಣಾಜೆ ಗ್ರಾಮದ ಅಣ್ಣೆರೆಪಾಲು ಪುರುಷಕೋಡಿ ಬಳಿ ಪರಮೇಶ್ವರ ಗೌಡ ಎಂಬವರ ದನದ ಹಟ್ಟಿಯು ಭಾರೀ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ.

ಘಟನೆ ಸಂಭವಿಸಿದಾಗ ಹಟ್ಟಿಯೊಳಗೆ ದನಗಳು ಇದ್ದರೂ ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ. ಕೊಣಾಜೆಯ ರಾಮಾಂಜನೇಯ ವ್ಯಾಯಾಮಶಾಲೆಯ ಸದಸ್ಯರು ಮಂಗಳವಾರ ಕುಸಿದು ಬಿದ್ದ ಹಟ್ಟಿಯ ಹೆಂಚುಗಳನ್ನು ತೆಗೆದು ಮಣ್ಣು ತೆರವುಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ.

Exit mobile version