UN NETWORKS
ಉಳ್ಳಾಲ: ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ನೀಡಿದ ಅಟಲ್ ಬಿಹಾರಿ ವಾಜಪೇಯಿಯವರು ಜಗತ್ತು ಮೆಚ್ಚಿದ ನಾಯಕ. ಬಿ.ಜೆ.ಪಿ.ಯನ್ನು ಕಟ್ಟಿ ಬೆಳೆಸಿ ಲೋಕಸಭೆಯಲ್ಲಿ ಎರಡು ಸ್ಥಾನದಿಂದ ಆಡಳಿತ ನಡೆಸುವವರೆಗೆ ಎತ್ತರಕ್ಕೆ ಏರಿಸಿದ ಮಹಾನ್ ನಾಯಕ ಎಂದು ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಹೇಳಿದರು.
ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ್ ಉಳ್ಳಾಲ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಹಿರಿಯರಾದ ಸೀತರಾಮ ಬಂಗೇರ, ಬಾಬು ಬಂಗೇರ, ಚಂದ್ರ ಶೇಖರ ಉಚ್ಚಿಲ್, ಜಿಲ್ಲಾ ಪಂ. ಸದಸ್ಯರಾದ ಧನಲಕ್ಷೀ ಗಟ್ಟಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಗಟ್ಟಿ ಸಮಾಜದ ಅಧ್ಯಕ್ಷರಾದ ಪವಿತ್ರ ಗಟ್ಟಿ, ಮೊಗವೀರ ಸಮಾಜದ ಅಧ್ಯಕ್ಷರಾದ ಭರತ್ ಉಳ್ಳಾಲ್, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಮನೋಜ್ ಆಚಾರ್ಯ ಮತ್ತು ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಅಭಿಮಾನಿಗಳು ಉಪಸ್ಥಿತರಿದ್ದರು.
ವಾಜಪೇಯಿಯವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಶ್ರಧ್ದಾಂಜಲಿ ಅರ್ಪಿಸಲಾಯಿತು.