ಮಾಡೂರು: ಗೋಲ್ಡನ್ ಕ್ರಿಕೆಟರ್ಸ್
ಮಾಡೂರು ಗೋಲ್ಡನ್ ಕ್ರಿಕೆಟರ್ಸ್ ವತಿಯಿಂದ ಗೋಲ್ಡನ್ ಗ್ರೌಂಡ್ ನಲ್ಲಿ ನಡೆದ ಸ್ವಾತಂತ್ರ್ಯೋವದ ಧ್ವಜರೋಹಣ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೆರೆವೇರಿಸಿದರು.
ಕಾಂಗ್ರೆಸ್ ಕೋಟೆಕಾರ್ ಮಹಿಳಾ ಸಮಿತಿ ಅಧ್ಯಕ್ಷೆ ಚಾಂದಿನಿ ಹರೀಶ್, ಕಾಂಗ್ರೆಸ್ ಮುಖಂಡರಾದ ಸಲೀಂ ಮೇಗ, ರಹಿಮಾನ್ ಕೋಡಿಜಾಲ್, ಗೋಲ್ಡನ್ ತಂಡದ ಅಧ್ಯಕ್ಷ ಎಂ.ಎ ಬಶೀರ್, ನಾಯಕನಾದ ಸಲಾಂ ಕೊಂಡಾಣ, ಹಿರಿಯ ಆಟಗಾರ ಆಸಿಪ್ ಮಾಡೂರು, ರಶೀದ್ ಮಾಡೂರು ಎಂಜೆಎಫ್ ಸದಸ್ಯರಾದ ರಪೀಕ್ ಮುಂಬೈ, ಇಸ್ಮಾಯಿಲ್ ಕೊಂಡಾಣ, ಸಮಾಜ ಸೇವಕರಾದ ರಿಯಾಝ್ ಕೊಂಡಾಣ ಉಪಸ್ಥಿತರಿದ್ದರು.ರಶೀದ್ ಮಾಡೂರು ಸ್ವಾಗತಿಸಿದರು.
ಉಳ್ಳಾಲ್ ಬ್ಲಾಕ್ ಕಾಂಗ್ರೆಸ್
ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಕಚೇರಿಯಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಸೇವಾದಳ ಮುಖ್ಯ ಸಂಘಟಕ ರೂಪೇಶ್ ಭಟ್ನಗರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಪ್ರ.ಕಾರ್ಯ ಧರ್ಶಿ ರಹಿಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿ ಸಲೀಂ ಮೇಗ, ಇಕ್ಬಾಲ್ ಸಮನಿಗೆ, ನಗರಸಭಾ ಅಧ್ಯಕ್ಷ ಕುಞಮೋನು, ಮುಖಂಡರಾದ ಇಸೃಯಿಲ್ ಶಾಫಿ ಬಾಬುಕಟೆ, ಮನ್ಸೂರ್ ಉಳ್ಳಾಲ್, ದೀಪಕ್ ಪಿಲಾರ್, ಕಿಶೋರ್, ಲವೀಶ್, ಯುಟಿ ಮಹಮ್ಮದ್ ಮೊದಲಾದವರು ಭಾಗವಹಿಸಿದರು.
ಟೀಮ್ ಈಗಲ್
ಟೀಮ್ ಈಗಲ್ ವತಿಯಿಂದ ನಡೆದ 72ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಮುನ್ನೂರು ಯುವಕ ಮಂಡಲದ ಗೌರವಾಧ್ಯಕ್ಷ ಹರೀಶ್ ಮುಂಡೋಳಿ ನೆರವೇರಿಸಿದರು.
ಉಳ್ಳಾಲ ವಲಯ ಡಿವೈಎಫ್ ಐ ಅಧ್ಯಕ್ಷ ಜೀವನ್ ರಾಜ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಮುನ್ನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುಸ್ತಾಫ, ಉಳ್ಳಾಲ ಬಂಡಿಕೊಟ್ಯ ಮಲರಾಯ ದೈವಸ್ಥಾನದ ಆಡಳಿತ ಮುಕ್ತೇಸರ ಹರ್ಷವರ್ಧನ್, ಕಟ್ಟಡ ಮತ್ತು ಇತರ ನಿರ್ಮಾಣ ಸಂಘದ ಅಧ್ಯಕ್ಷ ಜನಾರ್ಧನ ಕುತ್ತಾರ್, ಟೀಮ್ ಈಗಲ್ ಅಧ್ಯಕ್ಷ ಸ್ಟೀವನ್ ಮೊಂತೆರೋ, ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.ಲೈಝಿಲ್ ಸ್ವಾಗತಿಸಿದರು. ರಕ್ಷತ್. ಕೆ. ವಂದಿಸಿದರು. ಶ್ರವಣ್ ರಾಜ್ ಕಾರ್ಯಕ್ರಮ ನಿರೂಪಿಸಿದರು.