UN NETWORKS
ಬೆಂಗಳೂರು: ಬೆಂಗಳೂರಿಗೆ ಹೊಸ ಟೇಸ್ಟನ್ನು ಪರಿಚಯಿಸಲು ಮುಂದಾಗಲಿರುವ ` ಕುಲುಕ್ಕಿ’ ಸಂಸ್ಥೆ ಯಶಸ್ವಿಯಾಗಿ ಎಲ್ಲಾ ಹರೆಯದವರಿಗೂ ಮೆಚ್ಚುವಂತೆ ಮುಂದುವರಿಯಲಿ ಎಂದು ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಇಂತಹ ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಬಹಳಷ್ಟು ಕಡಿಮೆ. ಆದರೆ ಹೊಸ ಜನರೇಷನ್ನಿನವರು ಒಪ್ಪಿಕೊಳ್ಳುವಂತಹ ಹೊಸ ಟೇಸ್ಟನ್ನು ಪರಿಚಯಿಸುವ ಕಾರ್ಯ ಆಗಿರುವುದರಿಂದ ಉದ್ಘಾಟನೆ ನಡೆಸಿರುವೆ. ಬೆಂಗಳೂರಿಗೆ ಇದೊಂದು ಸಂತಸದ ಕ್ಷಣವಾಗಿದೆ. ಬೆಂಗಳೂರಿಗೆ ಕುಲುಕ್ಕಿಯನ್ನು ಪರಿಚಯಿಸಲಾಗುತ್ತಿದ್ದು, ಈ ಮೂಲಕ ಎಲ್ಲಾ ಹರೆಯದವರಿಗೂ ಕುಲುಕ್ಕಿ ಮೆಚ್ಚುವಂತಿರಲಿ ಸಂಸ್ಥೆ ಬೆಂಗಳೂರಿಗರ ಮನ ಗೆಲ್ಲಲಿ ಎಂದು ಶುಭಹಾರೈಸಿದರು.
ಕುಲುಕ್ಕಿ ಸಂಸ್ಥೆ ಮಾಲೀಕ ಮಸ್ಹೂದ್ ಮಾತನಾಡಿ ಮೊದಲ ಬಾರಿಗೆ ಕುಲುಕ್ಕಿ ಪ್ರಾಡಕ್ಟ್ ಅನ್ನು ಬೆಂಗಳೂರಿಗೆ ಪರಿಚಯಿಸುತ್ತಿದ್ದೇವೆ. ಕೇರಳ, ಮಂಡ್ಯ, ಮೈಸೂರು ಭಾಗಗಳಲ್ಲಿ ಫ್ರಾಂಚೈಸಿಗಳನ್ನು ನೀಡಲಾಗಿದೆ. ಮುಂದೆ ಹೈದರಾಬಾದ್ ಸೇರಿದಂತೆ ದೇಶದಾದ್ಯಂತ ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಅತಿಶೀಘ್ರದಲ್ಲಿ ದುಬೈನಲ್ಲೂ ಆರಂಭಿಸಲಾಗುವುದು . ಶೇ.100 ನೈಸರ್ಗಿಕವಾದಂತಹ ತಿನಿಸು ಇದಾಗಿದೆ. ಆರೋಗ್ಯಕರವಾಗಿದ್ದು, ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಇದರಿಂದಾಗಿ ಗ್ರಾಹಕರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಂಗಳೂರಿಗರು ಮೆಚ್ಚುತ್ತಾರೆ ಅನ್ನುವ ಭರವಸೆ ಇದೆ ಎಂದರು.
ಈ ಸಂದರ್ಭ ಮಾಲೀಕರುಗಳಾದ ನೌಷಾದ್, ಮೊಯ್ದೀನ್, ಎಂಕೆಹೆಚ್ ಗ್ರೂಪ್‍ನ ಚೇರ್‍ಮೆನ್ ಅಬ್ಬಾಸ್ ಹಾಜಿ, ಕಲ್ಲಿಕೋಟೆ ಭಾಗದ ಲೋಕಸಭೆ ಸದಸ್ಯ ಎಂ.ಕೆ.ರಾಘವನ್, ಎಂ.ಕೆ.ಹೆಚ್ ಸಂಸ್ಥೆ ಸ್ಥಾಪಕ ಸದಸ್ಯ ಖಲೀಲ್, ಕೋರಮಂಗಲದ ಬಿಬಿಎಂಪಿ ಸದಸ್ಯ ಚಂದ್ರಪ್ಪ ಮುಖ್ಯ ಅತಿಥಿಗಳಾಗಿದ್ದರು.