Site icon Ullalavani

ಶಂಸುಲ್ ಉಲಮಾ ಅರೇಬಿಕ್ ಕಾಲೇಜು :ಅಬುದಾಬಿ ಘಟಕದ ನೂತನ ಕಮಿಟಿ ರಚನೆ

UN NETWORKS

ಉಳ್ಳಾಲ: ಶಂಸುಲ್ ಉಲಮಾ ಅರೇಬಿಕ್ ಕಾಲೇಜು – ತೋಡಾರ್ ಇದರ ಅಬುಧಾಬಿ ಘಟಕದ ನೂತನ ಕಮಿಟಿ ಶುಕ್ರವಾರ ರಚನೆಗೊಂಡಿತು.. ಗೌರವಾಧ್ಯಕ್ಷರು ಜನಾಬ್ ಹನೀಫ್ ಹರಿಯಮೂಲೆ, ಅಧ್ಯಕ್ಷರಾಗಿ ಜನಾಬ್ ಯಾಹ್ಯಾ ಕೊಡ್ಲಿಪೇಟ್,ಪ್ರಧಾನ ಕಾರ್ಯದರ್ಶಿ ಜನಾಬ್ ಹಫೀಜ್ ತುಂಬೆ,ಕೋಶಾಧಿಕಾರಿ ಜನಾಬ್ ಶಾಫಿ ಪೆರುವಾಯಿ ಅವರನ್ನು ಆರಿಸಲಾಯಿತು.

ಉಪಾದ್ಯಕ್ಷರುಗಳಾಗಿ ಜನಾಬ್ ಬಷೀರ್ ಹರಿಯಮೂಲೆ ,ಜನಾಬ್ ಮುಹಮ್ಮದ್ ಮಡಿಕೇರಿ, ಜನಾಬ್ ಕಾದರ್ ಕಾರ್ಕಳ, ಕಾರ್ಯದರ್ಶಿಗಳಾಗಿ ಜನಾಬ್ ರಾಯಿಜ್ಹ್ ಹರಿಯಮೂಲೆ, ಜನಾಬ್ ಅಶ್ರಫ್ ಮಾಂಕುಡೆ ವಿಟ್ಲ ಇವರನ್ನು ನೇಮಿಸಲಾಯಿತು. ಸಂಚಾಲಕರನ್ನಾಗಿ ಜನಾಬ್ ಜಲೀಲ್ ಮರಕಿಣಿ, ಜನಾಬ್ ಫೈಸಲ್ ಗುಣಾಜೆ,ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಹತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ SKSSF ಕರ್ನಾಟಕ ಅಬುಧಾಬಿ ಇದರ ಅಧ್ಯಕ್ಷರಾದ ಜನಾಬ್ ಹನೀಫ್ ಹರಿಯಮೂಲೆ ಯವರು ಸಭೆಯಲ್ಲಿ ಆಸೀನರಾದ ಯುವ ಸಮೂಹಕ್ಕೆ ನಾಯಕತ್ವ ಹೇಗಿರಬೇಕು, ಮಗನಾಗಿ, ಗಂಡನಾಗಿ, ಒಬ್ಬ ಸಹೋದರನಾಗಿ, ತಂದೆಯಾಗಿ, ನೆರೆಕರೆಯರೊಂದಿಗೆ ಹಾಗು ಸಮುದಾಯಕ್ಕೆ ನಮ್ಮ ಕರ್ತವ್ಯಗಳನ್ನು ಹೇಗೆ ನಿಭಾಹಿಸೋದು ಅಂತ ಮನವರಿಕೆ ಮಾಡಿದರಲ್ಲದೆ. ತಖ್ವಾದಿಂದ ಕೂಡಿದ ನಾಯಕತ್ವಕ್ಕೆ ಮಾತ್ರ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದಕ್ಕೆ ಸಾಧ್ಯ ಎಂದು ತಿಳಿ ಹೇಳಿದರು.
ಜನಾಬ್ ಶಾಫಿ ಪೆರುವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು . ಜನಾಬ್ ಹಫೀಜ್ ತುಂಬೆ ವಂಧನಾರ್ಪಣೆ ಸಲ್ಲಿಸಿ ಸಭೆಯನ್ನು ಸ್ವಲಾತಿನೊಂದಿಗೆ ಮುಕ್ತಾಯ ಗೊಳಿಸಲಾಯಿತು.

Exit mobile version