Site icon Ullalavani

ನದಿಗೆ ಹಾರಿದ ಯುವಕ

UN NETWORKS

ಉಳ್ಳಾಲ: ಯುವಕನೋರ್ವ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾ.ಹೆ.66 ರ ನೇತ್ರಾವತಿ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ.

ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ರಿಕ್ಷಾದಲ್ಲಿ ದಂಪತಿ ತೆರಳುತ್ತಿದ್ದ ಸಂದರ್ಭ ಕಪ್ಪು ಬಣ್ಣದ ಟೀಶರ್ಟ್  ಹಾಗೂ ಬ್ಯಾಗ್ ಧರಿಸಿದ ಯುವಕ ಸೇತುವೆಯಿಂದ ಜಿಗಿದಿರುವುದನ್ನು ಕಂಡಿದ್ದಾರೆ. ಕೂಡಲೇ ರಿಕ್ಷಾ ನಿಲ್ಲಿಸಿ ಸೇತುವೆಯಡಿ ನೋಡಿದಾಗ ಯುವಕ ಮುಳುಗಿ ಮೇಲೇಳುತ್ತಿರುವ ದೃಶ್ಯ ಕಂಡುಬಂದಿದೆ.

ಉಳಿದ ವಾಹನ ಸವಾರರು ನಿಲ್ಲಿಸಿ ನೋಡುವಷ್ಟರಲ್ಲಿ ಕೇವಲ ಬ್ಯಾಗ್ ಮಾತ್ರ ನದಿ ನೀರಿನಲ್ಲಿ ತೇಲಾಡುತಿತ್ತು. ಮಹಿಳೆ ಹೇಳಿಕೆಯಂತೆ ಸುಮಾರು 30 ರಿಂದ 35ರ ಹರೆಯದ ಯುವಕನಾಗಿದ್ದಾನೆಂದು ತಿಳಿದುಬಂದಿದೆ.

Exit mobile version