Site icon Ullalavani

ಅಭಯ ಆಶ್ರಯ ಆತ್ಮ ದೇಗುಲದಲ್ಲಿ ಆಟಿಡೊಂಜಿ ದಿನ

UN NETWORKS

ಕೊಣಾಜೆ: ಕೇಸರಿಮಿತ್ರ ವೃಂದ, ಕೇಸರಿ ಮಾತೃ ಮಂಡಳಿ ಕುಂಪಲ ಹಾಗೂ ರೋಟರಿ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ “ಆಟಿಡೊಂಜಿ ದಿನ” ಆಟಿಯ ವಿಶೇಷ ಕಾರ್ಯಕ್ರಮ ಅಸೈಗೋಳಿಯ ಅಭಯ ಆಶ್ರಯ ಆತ್ಮ ದೇಗುಲದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಸರಿ ಮಿತ್ರ ವೃಂದದ ಅಧ್ಯಕ್ಷ ನವೀನ್ ಕುಜುಮಗದ್ದೆ ವಹಿಸಿದ್ದರು. ಕಾರ್ಯಕ್ರಮವನ್ನು ಯೋಧ ಸುದೀನ್ ಬೇಕಲ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಪೈ,ಅಬಕಾರಿ ಇಲಾಖೆ ಮಂಗಳೂರು ವೃತ್ತ ನಿರೀಕ್ಷಕ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುಮಾರ್ ಕುದ್ರೋಳಿ, ತುಳುನಾಡು ಚಿಟ್ಸ್ ಪ್ರೈ. ಲಿ. ಮಾಲಕ ಸಂದೇಶ್ ಶೆಟ್ಟಿ , ಉಳ್ಳಾಲ ಅವಿನಾಶ್ ಎಂಟಪ್ರೈಸಸ್ ಮಾಲಕ ಬಿ. ಡಿ. ಗೋಪಾಲ್, ತೊಕ್ಕೊಟ್ಟು ಶಿವಾಜಿ ಪ್ರೆಂಡ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಿರಿಲ್ ರೊಬರ್ಟ್ ಡಿಸೋಜ್, ಮಾತೃ ಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮೀ ಕುಂಪಲ, ಆತ್ಮ ದೇಗುಲ ಅಭಯಾಶ್ರಯ ಮೇಲ್ವಿಚಾರಕಿ ನಳಿನಿ ಉಪಸ್ಥಿತರಿದ್ದರು.
ಆಕಾಶವಾಣಿ ಮಂಗಳೂರು ತುಳು ವಾರ್ತಾ ವಾಚಕ ರಘುನಾಥ್ ವರ್ಕಾಡಿ ವಿಶೇಷತೆಯ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಆತ್ಮ ದೇಗುಲದ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ರಸಪ್ರಶ್ನೆ, ಒಗಟುಗಳು ಕೇಳಲಾಯಿತು ಹಾಗೂ ಚುಟುಕು ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಶ್ರುತಿಲಯ ಕಲಾ ಕೇಂದ್ರ, ಕುತ್ತಾರ್ ಇವರಿಂದ ಮನರಂಜನೆಗಾಗಿ ಆಟಿ ಕಳೆಂಜ, ಮತ್ತು ಇತರ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಕಾರ್ಯಕ್ರಮ ನಡೆಯಿತು.

ಸುಮಾರು 20ಕ್ಕೂ ಮಿಕ್ಕಿದ ಆಟಿಯ ವಿಶೇಷ ಆಹಾರವನ್ನು ಮಾತೃ ಮಂಡಳಿಯ ಸದಸ್ಯರು ಸ್ವತಃ ತಯಾರಿಸಿ ಆತ್ಮದೇಗುಲದ ಸದಸ್ಯರಿಗೆ ಮತ್ತು ಸೇರಿದ ಸಭಿಕರಿಗೆ ಉಣಬಡಿಸಿದರು. ಕೋಣಾಜೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಕೂಡಾ ಆಗಮಿಸಿ ಆಟಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಂತಿಮವಾಗಿ ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಇದರ ವತಿಯಿಂದ 5000 ರೂ. ಧನಸಹಾಯವನ್ನು ಆತ್ಮ ದೇಗುಲದ ಮೇಲ್ವಿಚಾರಕಿ ನಳಿನಿ ಅವರಿಗೆ ಹಸ್ತಾಂತರಿಸಲಾಯಿತು. ಕೇಸರಿ ಮಿತ್ರವೃಂದ ಮತ್ತು ಕೇಸರಿ ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version