UN NETWORKS
ಉಳ್ಳಾಲ: ಕೆಸರು ಗದ್ದೆ ಕ್ರೀಡಾಕೂಟದಿಂದ ಆರೋಗ್ಯವೃದ್ಧಿಯೊಂದಿಗೆ ಗದ್ದೆಯ ಕೃಷಿಯ ಮಹತ್ವದ ಅರಿವು ಮೂಡಲು ಸಾಧ್ಯ ಎಂದು ಪಾನೀರು ಚರ್ಚ್‍ನ ಧರ್ಮಗುರು ರೆ| ಫಾ| ಡೆನ್ನಿಸ್ ಸುವಾರಿಸ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಮೊಗರ್ನಾಡು ಚರ್ಚಿನ ಧರ್ಮಗುರು ರೆ| ಫಾ| ದೀಪಕ್ ಡೆಸ್ಸಾ ಪಾನೀರು ಚರ್ಚ್‍ನ ಬ್ರದರ್ ಜೋನ್ಸನ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲಿಯಾಸ್ ಡಿ’ಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್ ಕಥೊಲಿಕ್ ಸಭಾ ಮಂಗಳೂರು ದಕ್ಷಿಣ್ ವಾರಾಡೊ ಅಧ್ಯಕ್ಷ ಅರುಣ್ ಡಿ’ಸೋಜ, ಕಾರ್ಯಕ್ರಮ ಮಹಾಪೋಷಕ ಜ್ಯೋತಿ ರೆಮ್ಮಿ ಗದ್ದೆಯ ಮಾಲಕ ಡೆನ್ಸಿಲ್ ಡೆಸ್ಸಾ ಕಥೊಲಿಕ್ ಸಭಾ ಪಾನೀರು ಘಟಕದ ಅಧ್ಯಕ್ಷ ಸ್ಟ್ಯಾನಿ ರೊಡ್ರಿಗಸ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಅಶ್ವಿನ್ ಮೊಂತೆರೊ ನಿರೂಪಿಸಿದರು. ರುವಿತಾ ಮಿನೇಜಸ್ ವಂದಿಸಿದರು. ಪ್ರಾಂಕಿ ಕುಟಿನ್ಹಾ ಆಟೋಟ ಸ್ಪರ್ಧೆಗಳ ನಿರೂಪಣೆ ಮಾಡಿದರು. ಕ್ರೀಡಾಕೂಟದಲ್ಲಿ ಚರ್ಚ್‍ನ ಸುಮಾರು 300ಕ್ಕಿಂತ ಅಧಿಕ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಚಾಂಪಿಯನ್ ಪ್ರಶಸ್ತಿ ಕುಂಪಲ ವಾಳೆ ಹಾಗೂ ದ್ವಿತೀಯ ಚಾಂಪಿಯನ್ ಪ್ರಶಸ್ತಿ ಪಟ್ಟೋರಿ ವಾಳೆಗೆ ನೀಡಿ ಗೌರವಿಸಿದರು.