Site icon Ullalavani

ಉಳ್ಳಾಲ :ಮದನಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

UN NETWORKS

ಉಳ್ಳಾಲ: ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ನಡೆಯುವ ‘ಸ್ವಚ್ಛ ಮಂಗಳೂರು ಅಭಿಯಾನ’ದಡಿ ಉಳ್ಳಾಲ ಅಳೇಕಲದ ಮದನಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್ ಘಟಕಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಪ್ರೌಢ ಶಾಲಾ ವಿಭಾಗದ ಸಂಚಾಲಕ ಯು.ಎನ್. ಇಬ್ರಾಹೀಂ ರಾಮಕೃಷ್ಣ ಮಿಷನ್‌ನ ಈ ಅಭಿಯಾನ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಪ್ರೌಢಶಾಲಾ ವಿಭಾಗದ ಅಧ್ಯಾಪಕ ಪಿ.ಡಿ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕಿ ಪ್ರಜ್ಞಾ ವಂದಿಸಿದರು.

Exit mobile version