UN NETWORKS
ಉಳ್ಳಾಲ: ವಿದ್ಯಾರ್ಥಿನಿಯರು ಓದುವ ಹವ್ಯಾಸವನ್ನು ಬೆಳೆಸಿ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಕಣಚೂರು ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ವಿಶ್ರಾಂತ ಕುಲಪತಿ ಪ್ರೊ| ಅಬ್ದುಲ್ ರೆಹಮಾನ್ ಆಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಸಂಸ್ಥೆಯ ಅಧ್ಯಕ್ಷ ಯು.ಕೆ ಮೋನು ವಹಿಸಿ ವಿದ್ಯಾರ್ಥಿನಿಯರು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಆ ಗುರಿಯನ್ನು ಸಾಧಿಸುವ ಕಡೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ, ಎಲ್ಲವನ್ನು ಅರಿತು, ಜಯಿಸಿ, ತನ್ನ ಕಾಲ ಮೇಲೆ ತಾನು ಸ್ವಾತಂತ್ರವಾಗಿ ನಿಲ್ಲುವ ವಿದ್ಯಾರ್ಥಿ ಉತ್ತಮ ಬದುಕನ್ನು ನಡೆಸಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾ„ಕಾರಿಗಳಾದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಮುಫೀದಾ, ಕಾರ್ಯದರ್ಶಿಯಾಗಿ ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಬಶರಿಯಾ ಮೊನೆಕೋ , ಸಹ ಕಾರ್ಯದರ್ಶಿಯಾ ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಮನಾಲ್, ಸಾಂಸ್ಕೃತಿಕ ಕಾರ್ಯದರ್ಶಿಯಾದ ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ತುಳಸಿ, ಕ್ರೀಡಾ ಕಾರ್ಯದರ್ಶಿ ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಫೌಜಿಯಾ ಇವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ ರವರು ಪ್ರಮಾಣ ವಚನ ಭೋಧಿಸಿದರು.
ಕಣಚೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಕಣಚೂರು ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಆನಂದಿ, ಕಣಚೂರು ಪ್ರೀ ಪ್ರೈಮರಿಯ ಪ್ರಾಂಶುಪಾಲೆ ಲಿನೆಟ್ ಡಿಸೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬಶರಿಯಾ ಮೊನೆಕೋ ಸ್ವಾಗತಿಸಿದರು. ಮುಫೀದಾ ವಂದಿಸಿದರು. ಬಿ.ಸಿ.ಎ ವಿಭಾಗದ ಉಪನ್ಯಾಸಕಿ ದಯಾನ ಕಾರ್ಯಕ್ರಮ ನಿರ್ವಹಿಸಿದರು.