ಮದನಿನಗರ ನಿವಾಸಿ ಮಹಮ್ಮದ್ ಕಬೀರ್ ತಸ್ಲೀಂ ಯಾನೆ ತಚ್ಚಿ (21) ಬಂಧಿತ.ರಿಕ್ಷಾ ಚಾಲಕ ಅಜಿತ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ರಿಕ್ಷಾ ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರಾದ ಅಜಿತ್ ಮತ್ತು ಮಹಮ್ಮದ್ ಆಲಿ ಎಂಬವರ ನಡುವೆ ವಾಗ್ವಾದ ನಡೆದಿತ್ತು. ಈ ಸಂಬಂಧ ಮಹಮ್ಮದ್ ಆಲಿ ತನ್ನ ಸಂಬಂಧಿಕನೇ ಆಗಿರುವ ನಾಲ್ಕು ಪ್ರಕರಣಗಳ ಆರೋಪಿ ಆಗಿರುವ ಮಹಮ್ಮದ್ ಕಬೀರ್ ಯಾನೆ ತಚ್ಚಿ ಎಂಬಾತನನ್ನು ಕರೆದಿದ್ದ. ಇಬ್ಬರು ಸೇರಿ ಅಜಿತ್ ಮೇಲೆ ಚೂರಿಯಿಂದ ಇರಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯನ್ನು ಒಡ್ಡಿದ್ದಾರೆ. ಬಳಿಕ ಅಜಿತ್ ಸ್ಥಳದಿಂದ ಪರಾರಿಯಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಅಲ್ಲಿಗೆ ಬಂದ ಮಹಮ್ಮದ್ ಆಲಿ, ತಚ್ಚಿ ವಿರುದ್ಧ ದೂರು ನೀಡಿದಲ್ಲಿ ತಲೆ ಹೋಗಬಹುದು ಎಂದು ಕೊಲೆಬೆದರಿಕೆ ಒಡ್ಡಿದ್ದನು.
ಇದೀಗ ಬಂಧನಕ್ಕೊಳಗಾಗಿರುವ ಕಬೀರ್ ಯಾನೆ ತಚ್ಚಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯ್ಲಲಿ ದರೋಡೆ ಯತ್ನ , ಕೊಲೆ ಯತ್ನ ಮತ್ತು ಕಳವು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳಿವೆ.