Site icon Ullalavani

ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

UN NETWORKS

ಕೊಣಾಜೆ: ಇಂದಿನ ಆಧುನಿಕತೆಯಲ್ಲಿ ಸಮಾಜಕ್ಕೆ ಇಂಜಿನಿಯರ್ ಮತ್ತು ವೈದ್ಯರುಗಳ ಕೊಡುಗೆ ಅಪಾರವಾಗಿದೆ. ಇಂದು ಈ ಎರಡು ವೃತ್ತಿರಂಗದವರ ಜವಬ್ಧಾರಿ ಮತ್ತಷ್ಟು ಹೆಚ್ಚಿದೆ. ಈ ನಿಟ್ಟಿನಲ್ಲಿ ಜಾಗತಿಕ ಸ್ಮರ್ಧಾತ್ಮಕದ ಈ ಕಾಲಘಟ್ಟದಲ್ಲಿ ಯುವಸಮುದಾಯದ ಪಾತ್ರ ಮಹತ್ವದ್ದು ಎಂದು ಬೆಂಗಳೂರು ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪಪ್ರಾಂಶುಪಾಲ ಡಾ.ಭಗವಾನ್ ಬಿ.ಸಿ. ಅವರು ಅಭಿಪ್ರಾಯಪಟ್ಟರು.

ಅವರು ಶನಿವಾರ ನಡುಪದವಿನ ಪಿ.ಎ.ಇಂಜೀನಿಯರಿಂಗ್ ಕಾಲೇಜಿನ 11ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಉನ್ನತ ಶಿಕ್ಷಣದಿಂದ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಿದ್ದು ಇದರೊಂದಿಗೆ ಉತ್ತಮ ಪರಿಶ್ರಮವೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳು, ಸೇವಾ ಮನೋಭಾದೊಂದಿಗೆ ಉತ್ತಮ ಹವ್ಯಾಸಗಳನ್ನಿಟ್ಟು ಮುನ್ನಡೆಯಬೇಕು. ಶಿಕ್ಷಣವು ನಮ್ಮ ಯಶಸ್ವಿಗೆ ಇರುವ ಪ್ರಮುಖ ಅಸ್ತ್ರವಾಗಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಹೇಳಿದರು.
ಬೆಂಗಳೂರು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಇದರ ಕರ್ನಾಟಕ ಅಕಾಡೆಮಿಕ್ ರಿಲೇಶನ್‍ಶಿಪ್ ಮ್ಯಾನೇಜರ್ ಶ್ರೀನಿವಾಸ ರಾಮಾನುಜಂ ಅವರು ಮಾತನಾಡಿ, ನಾವು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆಯಿದ್ದರೆ ಸಮಾಜವೇ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ನಾವು ಸಮಾಜದ ಜೊತೆಗೆ ಹೆಚ್ಚಾಗಿ ಬೆರೆತುಕೊಂಡಾಗ ಗೌರವಿಸುವ ಮನಸ್ಸುಗಳು ಕೂಡಾ ಹೆಚ್ಚಾಗುತ್ತದೆ. ನಾವು ಯಾವುದೇ ವೃತಿರಂಗದಲ್ಲಿದ್ದರೆ ಕಲಿಕೆ ಮತ್ತು ನಾವು ಕಲಿತದನ್ನು ಸಮಾಜಕ್ಕೆ ಹಂಚುವ ಮನೋಭಾವ ನಮ್ಮಲ್ಲಿರಬೇಕು ಇದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಿದರು.

ಪಿ.ಎ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಅಬ್ದುಲ್ ಸಲಾಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಎ.ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ.ಸಪ್ರ್ರಾಜ್ ಹಾಸಿಂ ಜೆ, ಆಡಳಿತ ನಿರ್ದೇಶಕ ಕೆ.ಎಂ.ಹನೀಫ್, ಹಣಕಾಸು ನಿರ್ದೇಶಕ ಅಹ್ಮದ್ ಕುಟ್ಟಿ, ಸಿವಿಲ್ ವಿಭಾಗದ ಎಚ್‍ಓಡಿ ಡಾ.ಪಾಲಾಕ್ಷಪ್ಪ, ಸಂಶೋಧನಾ ವಿಭಾಗದ ಡೀನ್ ಡಾ.ಝಾಹಿದ್ ಅನ್ಸಾರಿ, ಇಸಿಇ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಪ್ರಸಾದ್, ಸಿಎಸ್ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಶರ್ಮಿಳಾ ಕುಮಾರಿ, ಪ್ರೊ.ದಿವ್ಯ ಶೆಟ್ಟಿ, ಎಂಬಿಎ ವಿಭಾಗದ ಡಾ.ಶರೀನ್ ಪಿ, ಫಿಸಿಕ್ಸ್ ವಿಭಾಗದ ಮುಖ್ಯಸ್ಥರಾದ ಇಸ್ಮಾಯಿಲ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಝಿಶಾನ್ ಅಬ್ದುಲ್ಲಾ ಮತ್ತು ನೇಮಕಾತಿ ಅಧಿಕಾರಿ ಮೊಹಮ್ಮದ್ ಹುಸೈನ್ ಕೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಪ್ರತಿಜ್ಞಾ ವಿಧಿ ನಿರ್ವಹಿಸಿದರು.ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ ಸ್ವಾಗತಿಸಿದರು.

ಉಪಪ್ರಾಂಶುಪಾಲ ಡಾ.ರಮೀಸ್ ಎಂ.ಕೆ.ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಮತ್ತು ಪ್ರೊ,ಶರೀನ್ ಶೇಖ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version