Site icon Ullalavani

ಯೆನೆಪೋಯ:ಬಾಯಿ ಆರೋಗ್ಯ ದಿನಾಚರಣೆ

UN NETWORKS

ಯೆನೆಪೋಯ: ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪೆರಿಯೋಡೊಂಟಿಕ್ಸ್ ವಿಭಾಗದಲ್ಲಿ ಬಾಯಿ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ದ.ಕ.ಜಿಲ್ಲಾ ಪಂ, ಹಿರಿಯ ಪ್ರಾಥಮಿಕ ಶಾಲೆ ಕುತ್ತಾರು, ಮುನ್ನೂರು, ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಾಯಿ ಆರೋಗ್ಯದ ಮತ್ತು ಸ್ವಚತೆಯ ಬಗ್ಗೆ ಅರಿವು ಮತ್ತು ಮಾಹಿತಿ ನೀಡಿ ದಂತ ಪೇಸ್ಟ್ ಮತ್ತು ದಂತ ಬ್ರಶ್ ವಿತರಿಸಲಾಯಿತು.

ಪ್ರಾಂಶುಪಾಲರಾದ ಡಾ| ಬಿ.ಎಚ್. ಶ್ರೀಪತಿ ರಾವ್ ಅವರು ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಕೊಲಾಜ್ ಮತ್ತು ಪೋಸ್ಟರ್ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಣೆ ಮಾಡಿದರು.

ಪೆರಿಯೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ| ಶಶಿಕಾಂತ್ ಹೆಗ್ಡೆಯವರು ಹೋರ ರೋಗಿಗಳಾಗಿ ಬಂದವರಿಗೆ ಬಾಯಿಯ ಆರೋಗ್ಯ ಮತ್ತು ಸ್ವಚತೆಯ ಬಗ್ಗೆ ಅರಿವು ಮತ್ತು ಮಾಹಿತಿ ನೀಡಿ ಅವರಿಗೆ ದಂತ ಪೇಸ್ಟ್ ಮತ್ತು ದಂತ ಬ್ರಶ್ ವಿತರಿಸಿದರು. ಸಹೋದ್ಯೋಗಿಗಳಾದ ಡಾ| ರಾಜೇಶ್ ಕೆ. ಎಸ್., ಡಾ| ಅರುಣ್ ಕುಮಾರ್, ಡಾ| ವಿನಿತಾ ಬೊಳೂರು, ಡಾ| ಶ್ರುತಿ ಪ್ರತಾಪ್, ಡಾ| ಅನುಪಮ ರಾವ್, ಡಾ| ವಿಜಯಕುಮಾರ್, ಡಾ| ಸ್ನೆಹಾ ಭಟ್, ಡಾ| ಹೇಝಲ್, ಡಾ| ಸರ್ವರಿ ಬೇಗಂ ಮತ್ತು ಪೆರಿಯೋಡೊಂಟಿಕ್ಸ್ ವಿಭಾಗದ ಸ್ನಾತಕೋತರ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Exit mobile version