Site icon Ullalavani

ಉಚ್ಚಿಲ ಬೋವಿ ಶಾಲೆಗೆ ಶತಮಾನೋತ್ಸವ ಸಂಭ್ರಮ

UN NETWORKS

ಉಳ್ಳಾಲ: ಉಚ್ಚಿಲದ ಬೋವಿ ಶಾಲೆ 100 ವರ್ಷಗಳ ಇತಿಹಾಸವನ್ನು ಪೂರೈಸುವ ಮೂಲಕ ಬೋವಿ ಸಮುದಾಯದ ಹಿರಿಮೆಗೆ ಪಾತ್ರವಾಗಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅಭಿಪ್ರಾಯಪಟ್ಟರು.ಅವರು ಸೋಮೇಶ್ವರದ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಟುಂಬದ ಸದಸ್ಯರ ಬದ್ಧತೆ, ಹಿರಿಯ ಸಹಧರ್ಮೀಯ ಪಾಲ್ಗೊಳ್ಳುವಿಕೆ ಯಿಂದ ಯಶಸ್ವಿ ಶತವರ್ಷವನ್ನು ಪೂರೈಸಲು ಸಾಧ್ಯವಾಗಿದೆ. ಶತಮಾನೋತ್ಸವದ ಪ್ರಯುಕ್ತ ಒಂದು ವರ್ಷಗಳ ನಿರಂತರ ಚಟುವಟಿಕೆಯನ್ನು ಹಮ್ಮಿಕೊಂಡಿರುವ ಸಮಿತಿಯ ಕಾರ್ಯ ಶ್ಲಾಘನೀಯ. ಮಕ್ಕಳಲ್ಲಿ ಜವಾಬ್ದಾರಿಯ ಮನಸ್ಸಿನ ಬೀಜ ಹಾಕಿದಲ್ಲಿ ಅದು ಮರವಾಗಿ ಬೆಳೆಯಲು ಸಾಧ್ಯ. ಹಿಂದೆ ಶಾಲೆಯಲ್ಲಿ ಆಡಳಿತ ಶೂನ್ಯತೆ, ಬದ್ಧತೆ ಕಡಿಮೆಯಿತ್ತು ಅನಿಸಿತ್ತು. ಆದರೆ 2004 ರ ನಂತರ ಹಿಂದಿನ ಭಾವೈಕ್ಯದ ಭಾವನೆಗಳನ್ನು ಬೆಳೆಸುವುದರ ಜೊತೆಗೆ ಶಾಲೆಯನ್ನು ಹಂತಹಂತವಾಗಿ ಬೆಳೆಸಲು ಸಾಧ್ಯವಾಗಿದೆ ಎಂದರು.

ಶತಾಯುಷಿ ನಾರಾಯಣ ಉಚ್ಚಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಘವ.ಆರ್.ಉಚ್ಚಿಲ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎನ್.ಜಿ.ಮೋಹನ್, ಮೂರೂರ ಬೋವಿ ಮಹಾಸಭಾ ಅಧ್ಯಕ್ಷ ಚಿದಾನಂದ ಉಚ್ಚಿಲ, ಶಾಲಾ ಆಡಳಿತ ಮಂಡಳಿ ಸಂಚಾಲಕ ದೇವದಾಸ್ ಉಚ್ಚಿಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ರೇವತಿ ಟೀಚರ್, ಮುಖ್ಯೋಪಾಧ್ಯಾಯಿನಿ ಮೇಘ ಉಚ್ಚಿಲ ಉಪಸ್ಥಿತರಿದ್ದರು.

Exit mobile version