UN NETWORKS
ಉಳ್ಳಾಲ: ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ನೂತನ ಅಧ್ಯಕ್ಷರಾಗಿ ಯತೀಂದ್ರ ಬಹುಮಾನ್ ಮೂಡಬಿದ್ರೆ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಗುಣಸಾಗರ್ ವಾಗ್ಮಾನ್ ಹಾಗೂ ಸಹಾಯಕರಾಗಿ ಅನಂತ್ ಪದ್ಮರಾಜ್ ಸಿಂಧ್ಯ ಕಾರ್ಯ ನಿರ್ವಹಿಸಿದರು.
ಉಪಾಧ್ಯಕ್ಷ ಪುರುಷೋತ್ತಮ ಬಹುಮಾನ್, ಕೋಶಾಧಿಕಾರಿ ಶ್ರೀಧರ್ ಬಹುಮಾನ್, ಜತೆ ಕಾರ್ಯದರ್ಶಿ ಶ್ರೀಧರ್ ಪಾಟೀಲ್, ಮಹಿಳಾ ವೇದಿಕೆ ಸಂಚಾಲಕಿ ಕೌಶಿಕಲಾ ಮೋಹನ್, ಯುವ ವೇದಿಕೆ ಸಂಚಾಲಕ ಲೋಕೇಶ್ ಬಹುಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೀವ ರಾವ್ ಸಿಂಧ್ಯಾ, ಮೋಹನ್ ರಾವ್ ಭೊಂಸ್ಲೇ, ಗಿರೀಶ್ ರಾವ್ ಭೊಂಸ್ಲೆ, ವಾಮನ ವಾಗ್ಮಾನ್ ಮುಲ್ಲಂಗೊಡ್, ನೀಳೋಜಿ ರಾವ್ ಭೊಂಸ್ಲೆ, ಬಿ ಜೆ ಚಂದ್ರಶೇಖರ್ ಪಾಟೀಲ್, ಯತೀಶ್ ಕುಮಾರ್ ಪಾಟೀಲ್, ಧನುಂಜಯ ಬಹುಮಾನ್, ಪ್ರೇಮಲತಾ ವೈ ರಾವ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ವಲಯ ಸಂಚಾಲಕರು, ವಿಶೇಷ ಆಹ್ವಾನಿತರು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಅಗಲಿದ ಬಂಧುಗಳಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಬಳಿಕ ಸಭೆ ಆರಂಭಗೊಂಡಿತು.ಕಾರ್ಯದರ್ಶಿ ರಾಜೇಶ್ ರಾವ್ ಪಾಟೀಲ್ ಸ್ವಾಗತಿಸಿ ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ಪ್ರದೀಪ್ ಚಂದ್ರ ಜಾಧವ್ ವಂದಿಸಿದರು.