UN NETWORKS
ಮಂಜೇಶ್ವರ:ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ಜುಲೈ ತಿಂಗಳ 16 ನೇ ಯೋಜನೆಯ ಸಹಾಯ ಹಸ್ತವನ್ನು ತಲಪಾಡಿ ಬಳಿಯ ನಾರ್ಲ ನಿವಾಸಿ ಮೋಹನ್ – ಹೇಮಲತಾ ದಂಪತಿ ಪುತ್ರ ರೋಶನ್ (10) ರವರಿಗೆ ನೀಡಲಾಯಿತು.
ಈತನ ಪೋಷಕರು ಉಚ್ಚಿಲದಲ್ಲಿ ಕ್ಯಾಂಟೀನ್ ಹೊಂದಿದ್ದು, ಇದರಲ್ಲಿ ಸಿಗುವ ಅಲ್ಪ ಆದಾಯವೇ ಇವರ ಜೀವನ. ರೋಶನ್ ನ ಸಹೋದರಿ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತಿದ್ಧಾರೆ. ರೋಶನ್ ರಿಗೆ ಬಾಧಿಸಿದ ಜ್ವರದಿಂದ ಇದೀಗ ಲಿವರ್ಗೂ ತೊಂದರೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೀಗ ಆಸ್ಪತ್ರೆಯ ಕರ್ಚು ವೆಚ್ಚಗಳು ಅಧಿಕವಾಗಿದ್ದು, ಮನೆಯವರಿಗೆ ಇದೀಗ ಏನು ಮಾಡಲು ಅಸಾಧ್ಯವಾಗಿದೆ. ಇವರ ಮನೆ ಮಂದಿಯ ಸಂಕಷ್ಟಮಯ ಬದುಕಿನ ಬವಣೆಯನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ನಿನ್ನೆ ಸಂಜೆ ಮನೆಗೆ ತೆರಳಿ ನೀಡಲಾಯಿತು.
ಸಂಸ್ಥೆಯ ಗೌರವ ಮಾರ್ಗದರ್ಶಕರಾದ ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ ಮನೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ರೋಶನ್ ರ ತಾಯಿ ಹಾಗೂ ಸಹೋದರಿ ಕೈಗೆ ಸಹಾಯ ಹಸ್ತವನ್ನು ಹಸ್ತಾಂತರಿಸಿದರು. ಈ ವೇಳೆ ಸಂಸ್ಥೆಯ ಪಧಾಧಿಕಾರಿಗಳಾದ ನ್ಯಾ. ನವೀನ್ ರಾಜ್ ಕೆ. ಜೆ, ನಳಿನಾಕ್ಷ ಆಚಾರ್ಯ ಉದ್ಯಾವರ, ಆಶಾ ಲೋಕೇಶ್ ಮಾಡ, ಗಿರಿ ವೀರ ನಗರ, ಅನಿಲ್ ಕುಮಾರ್ ಮಣಿಯಂಪಾರೆ, ರತನ್ ಕುಮಾರ್ ಹೊಸಂಗಡಿ, ಪ್ರಶಾಂತ್ ಆಚಾರ್ಯ ಅಂಗಡಿಪದವು, ಪ್ರದೀಪ್ ಮುರತನೆ, ಸುಖೇಶ್ ಬೆಜ್ಜ, ನಿತೇಶ್ ಪಜಿಂಗಾರ್, ಗಿರೀಶ್ ಮುನ್ನೀಪ್ಪಾಡಿ, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ಮೊದಲಾದವರು ಉಪಸ್ಥಿತರಿದ್ದರು.