UN NETWORKS
ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ಕೀರ್ತನ ಪ್ರವೀಣ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಅವರು “ಜಟಾಯು ಮೋಕ್ಷ” ಹರಿಕಥಾ ಸತ್ಸಂಗ ಬುಧವಾರ ನಡೆಸಿಕೊಟ್ಟರು.
ಉಪ ಪ್ರಾಂಶುಪಾಲ ಸೋಮಶೇಖರ ಎಂ ಹಾಗೂ ಪ್ರಶಾಂತ್ ಕುಮಾರ್ ಮುದುಂಗಾರುಕಟ್ಟೆ ಉಪಸ್ಥಿತರಿದ್ದರು. ಸಹಶಿಕ್ಷಕ ಶ್ರೀಹರಿ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸಹಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.