Site icon Ullalavani

ಪ್ರತ್ಯೇಕ ತುಳುನಾಡು ರಾಜ್ಯಕ್ಕೆ ಎಂ.ಸಿರಾಜ್ ಅಡ್ಕರೆ ಒತ್ತಾಯ

UN NETWORKS

ಉಳ್ಳಾಲ: ತುಳುನಾಡಿನ ಜನರನ್ನು ಹೊರ ರಾಜ್ಯದವರಂತೆ ನೋಡುತ್ತಿರುವ ಸರಕಾರ ಭಾಷಾವಾರು ಪ್ರಾಂತ್ಯವಾದ ತುಳುನಾಡಿಗೆ ಪ್ರತ್ಯೇಕ ರಾಜ್ಯ ನೀಡುವಲ್ಲಿ ಸಹಕರಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಪ್ರದೇಶವು ತುಳುನಾಡಿನ ಭಾಗವಾಗಿದೆ, ಕರ್ನಾಟಕ ಮತ್ತು ಕೇರಳ ಸರಕಾರದೊಂದಿದೆ ಹಂಚಿಕೆಯಾದ ತುಳುನಾಡು ಇಂದು ಎರಡೂ ರಾಜ್ಯದ ದಬ್ಬಾಳಿಕೆ, ಅನ್ಯಾಯಗಳಿಂದ ತತ್ತರಿಸಿಹೋಗಿದೆ, ತುಳುನಾಡಿನ ಮೇಲೆ ಮಲತಾಯಿ ಧೋರಣೆ ಮಾಡುತ್ತಿರುವ ಸರಕಾರ ಪರಿಸರವನ್ನು ಹಾಳುಮಾಡುವ ಯೋಜನೆಗಳನ್ನು ಹಾಕಿಕೊಂಡು ತುಳುನಾಡಿನ ಪರಿಸರ ನಾಶದ ಜೊತೆಗೆ ಜನರ ಸ್ವಾಸ್ಥ್ಯವನ್ನೂ ಹಾಳುಗೆಡವುತ್ತಿದೆ, ಅಭಿವೃಧ್ದಿಯ ವಿಚಾರದಲ್ಲಿ ತುಳುನಾಡನ್ನು ಕಡೆಗಣಿಸಲಾಗಿದೆ,ಪ್ರತೀ ಬಜೆಟ್ನಲ್ಲೂ ತುಳುನಾಡನ್ನು ಕಡೆಗಣಿಸಲಾಗಿದೆ, ನೇತ್ರಾವತಿ ನದಿ ತಿರುವು ಯೋಜನೆಯ ಮೂಲಕ ತುಳುಣಾಡಿನ ಕೃಷಿಕರಿಗೆ ನದಿಪಾತ್ರರಿಗೆ ಅನ್ಯಾಯ ಮಾಡುತ್ತಿದೆ. ಈ ಮೂಲಕ ಪರಿಸರ ನಾಶವನ್ನೂ ಮಾಡುತ್ತಿದೆ ಪ್ರಶ್ನಿಸಿದೆ ನಮ್ಮನ್ನೇ ದಬಾಯಿಸಲಾಗುತ್ತಿದೆ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಬಾಷೆ ಹಾಗೂ ಸಂವಿಧಾನದ ಎಂಟನೇ ಪರಿಚ್ಚೇಧಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಸರಕಾರ ಈಡೇರಿಸಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ತುಳುನಾಡು ಪ್ರತ್ಯೇಕ ರಾಜ್ಯ ಆಗಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version