UN NETWORKS
ತಲಪಾಡಿ: ಭಾರತೀಯ ಸೇನೆಯು ಪಾಕಿಸ್ತಾನದ ಹಿಡಿತದಲ್ಲಿದ್ದ ಕಾರ್ಗಿಲ್‍ನ್ನು ವಶಪಡಿಸಿದ ದಿನವಾದ ಜು. 26ನ್ನು ನೆನಪಿಸುವ ಸಲುವಾಗಿ ಕಾರ್ಗಿಲ್ ವಿಜಯ ದಿವಸವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನ್‍ಕರ್ ಮಾತನಾಡಿ ಸೈನಿಕನ ಜೀವನ ಹೇಗೆ ಇತರರಿಗೆ ಮಾದರಿಯಾಗಬಲ್ಲದು ಮತ್ತು ಭಾರತೀಯ ಸೇನೆಯಲ್ಲಿ ಲಭ್ಯವಿರುವ ವಿಪುಲ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಸಲುವಾಗಿ ಶಾಲೆಯ ಅಂತರ್‍ದಳಗಳ ನಡುವೆ ಅಮರ್ ಜವಾನ್ ಎಂಬ ವಿಷಯ ಆಧಾರಿತ ಪ್ರತಿಭಾ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸೈನಿಕರ ಜೀವನದ ತ್ಯಾಗ ಮತ್ತು ಬಲಿದಾನಗಳ ಮಹತ್ವವನ್ನು ಅರಿತುಕೊಂಡರು.