UN NETWORKS
ಅದೂರು: ಕಾಸರಗೋಡುವಿನ ಅದೂರುನಲಲ್ಲಿ ಸೈಯ್ಯದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಅದೂರು ಸಾರಥ್ಯದಲ್ಲಿ ಮಜ್ಲಿಸ್ ಅದೂರು ಕ್ಯಾಂಪಸ್‍ನಲ್ಲಿ ನಿರ್ಮಿಸಿದ ಮಜ್ಲಿಸ್ ಗ್ರಾಂಡ್ ಮಸೀದಿಯಲ್ಲಿ ಜುಮಾ ಇತ್ತೀಚೆಗೆ ಪ್ರಾರಂಭಗೊಂಡಿತು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಭಾಗವಹಿಸಿ ಮಾತನಾಡಿ ನಾನು ಉಲಮಾಗಳ ಮಾರ್ಗದರ್ಶನದಲ್ಲಿ ರಾಜ್ಯಕೀಯದಲ್ಲಿ ಮುಂದುವರಿಯುತ್ತಿದ್ದೆನೆ ಅಗಾಗಿ ನನ್ನ ರಾಜಕೀಯ ಜೀವನದಲ್ಲಿ ಯಸಶ್ವಿಯಗಿದೆ ಎಂದು ಹೇಳಿದರು.
ಸೈಯ್ಯದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಆದೂರು ಕಾರ್ಯಕ್ರಮದ ನೇತೃತ್ವ ವಹಿಸಿದರು.ಇಬ್ರಾಹೀಂ ಪೂಕುಂಞ ತಂಙಳ್ ಕಲ್ಲಕಟ್ಟ, ಪಂಜಿಕಲ್ ತಂಙಳ್, ಸೈಯ್ಯದ್ ಝೈನುಲ್ ಅಬಿದೀನ್ ಮುತ್ತುಕೋಯ ತಂಙಳ್ ಕನ್ನಾವಂ, ಸೈಯ್ಯದ್ ಅಟ್ಟಕೋಯ ತಂಙಳ್ ಅದೂರು, ಸೈಯ್ಯದ್ ಎ.ಪಿ.ಎಸ್ ತಂಙಳ್ ಆದೂರು, ಸೈಯ್ಯದ್ ಮುಹಮ್ಮದ್ ಸಖಾಫ್ ತಂಙಳ್ ಮನ್ನಪಾರೆ,ಸೈಯ್ಯದ್ ಹಸನ್ ಅಬ್ದುಲ್ಲಾ ಇಂಬೀಚ್ಚಿಕೋಯ ತಂಙಳ್,ಸೈಯ್ಯದ್ ಖಾಸೀಂ ತಂಙಳ್ ಸಾಲೇತ್ತೂರು, ಎಸ್ ವೈಎಸ್ ಮುಖಂಡ ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ,ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಯೂಸುಫ್ ಸಖಾಫಿ ಅದೂರು, ಮೊಹಮ್ಮದ್ ಮದನಿ ರೆಂಜಾ, ರಫೀಕ್ ಸಅದಿ ಅದೂರು, ಹನೀಫ್ ಸಅದಿ, ಜಲಾಲುದ್ದೀನ್ ಅಲ್-ಜಮಾಲುಲೈ ತಂಙಳ್ ಮಲ್ಲಪುರಂ, ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಉಪಸ್ಥಿತರಿದರು.