Site icon Ullalavani

ತೊಕ್ಕೊಟ್ಟು: SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಇದರ ವತಿಯಿಂದ ಪ್ರತಿಭಟನೆ

UN NETWORKS

ತೊಕ್ಕೊಟ್ಟು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಇದರ ವತಿಯಿಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ನೂತನ ಬಜೆಟ್ ನಲ್ಲಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದರ ವಿರುದ್ದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್ ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಮಾತನಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಕಿನ್ಯ ರವರು ಪ್ರತಿಭಟನೆಯ ನೇತ್ರತ್ವ ವಹಿಸಿದರು , ಉಪಾಧ್ಯಕ್ಷರಾದ ಸುಲೈಮಾನ್ ಉಸ್ತಾದ್ , ಜಿಲ್ಲಾ ಸಮಿತಿ ಸದಸ್ಯರಾದ ಝಾಹಿದ್ ಮಲಾರ್, ಕ್ಷೇತ್ರ ಕಾರ್ಯದರ್ಶಿ ಲತೀಫ್ ಕೋಡಿಜಾಲ್ ಹಾಜರಿದ್ದರು. ಫಯಾಝ್ ದೊಡ್ಡಮನೆ ಸ್ವಾಗತಿಸಿ. ಜೊತೆ ಕಾರ್ಯದರ್ಶಿ ಝಹೂರ್ ತುಂಬೆ ವಂದಿಸಿದರು.

ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೀಡಲಾಯಿತು.

Exit mobile version