ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಂಗಳೂರು ವೈನ್ ಮರ್ಚಂಟ್ ಅಸೋಸಿಯೇಶನ್‍ನ ನೂತನ ಅಧ್ಯಕ್ಷರಾಗಿ ಕೆ.ಟಿ.ಸುವರ್ಣ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಕ್ವಾಲಿಟಿಯಲ್ಲಿ ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್‍ನ ಅಧ್ಯಕ್ಷ ಗಣೇಶ್ ಶೆಟ್ಟಿ ಫುಡ್‍ಲ್ಯಾಂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಸೋಸಿಯೇಶನ್‍ನ ಪ್ರ, ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಮನುವೇಂದ್ರ ಆಳ್ವ, ಅಜಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ನಾಗೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೆ.ಎಲ್ ಪಿಂಟೋ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.
ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್‍ನ ಸಂಚಾಲಕ ರಾಜ್‍ಗೋಪಾಲ್ ರೈ, ಕೋಶಾಧಿಕಾರಿ ಚಂದ್ರನಾಥ್ ಅತ್ತಾವರ ಉಪಸ್ಥಿತರಿದ್ದರು.
ಕೆ.ಟಿ.ಸುವರ್ಣ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.