Site icon Ullalavani

ತಲಪಾಡಿಯಲ್ಲಿ `ದೇವೆರೆನ ಬಾಕಿಲ್ದ ಕಂಡಡೊಂಜಿ ದಿನ’

UN NETWORKS

ತಲಪಾಡಿ : ಶ್ರೀ ದುರ್ಗಾಪರಮೇಶ್ವರೀ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ ಕಿನ್ಯಾ ಕೋಟೆಕಾರು ಮೂರು ಗ್ರಾಮಗಳ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ `ದೇವೆರೆನ ಬಾಕಿಲ್ದ ಕಂಡಡೊಂಜಿ ದಿನ’ ನಡೆಯಿತು.

ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ದೀಪ ಬೆಳಗಿಸಿ, ಅಲಂಕಾರ ಗುಡ್ಡೆ ಮಲರಾಯ ದೈವದ ಪಾತ್ರಿ ಅಂತ ಪೂಜಾರಿ ತೆಂಗಿನ ಗರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಲಪಾಡಿ ಪಂಜಾಳ ರವೀಂದ್ರನಾಥ ಪಕ್ಕಳ ಕಂಬಳದ ಕೋಣ ಗದ್ದೆಯಲ್ಲಿ ಓಡಿಸುವ ಮುಖಾಂತರ ಕೆಸರುಗದ್ದೆ ಪ್ರಾರಂಭಗೊಂಡಿತು. ಕೆಸರುಗದ್ದೆಯ ಕುರಿತಾದ ಶೀರ್ಷಿಕೆಯ ಹಾಡಿನ ಧ್ವನಿ ಸುರಳಿಯನ್ನು ಐತಪ್ಪ ಶೆಟ್ಟಿ ಪಾಲು ಬಿಡುಗಡೆಗೊಳಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಮೇಲಾಂಟ, ಕ್ಯಾಪ್ಟನ್ ಮಾಧವ ಶೆಟ್ಟಿ, ಮಧು ವಿಜಯ ತಲಪಾಡಿ, ಸ್ತ್ರಿ ಶಕ್ತಿ ಗುಂಪಿನ ಒಕ್ಕೂಟದ ಅಧ್ಯಕ್ಷರುಗಳಾದ ಚಿತ್ರಾ ತಚ್ಚಾಣಿ, ಯಶೋಧಾ, ಸತೀಶ್ ಶೆಟ್ಟಿ ಸಾಂತ್ಯಗಡದ ಗುತ್ತು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ನಾರಾಯಣ ಕುಲಾಲ್ ದೇವಿಪುರ ಸ್ವಾಗತಿಸಿದರು. ರಮೇಶ್ ಆಳ್ವ ದೇವಿಪುರ ಕಾರ್ಯಕ್ರಮ ನಿರೂಪಿಸಿದರು. ರವಿ ಶೆಟ್ಟಿ ದೇವಿಪುರ ವಂದಿಸಿದರು.

Exit mobile version