UN NETWORKS
ಬಿಜೈ: ವಿದ್ಯಾರ್ಥಿಗಳ ಮೆದುಳು ಚುರುಕುಗೊಳ್ಳಲು ಚೆಸ್ ಪ್ರಮುಖ ಪಾತ್ರ ವಹಿಸುತ್ತದೆ. ಚೆಸ್ ಆಡುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆಯ ಮಟ್ಟವನ್ನು, ಸಮಯ ಪ್ರಜ್ಞೆಯನ್ನು, ಅದರೊಂದಿಗೆ ಕ್ರಿಯಾಶೀಲತೆಯ ಗುಣವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ವಾರ್ಡ್‍ನ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್‍ರವರು ವಹಿಸಿ ಚೆಸ್ ಆಟದಲ್ಲಿ ವಿಶ್ವನಾಥ್ ಆನಂದರ ಸಾಧನೆ ಅದ್ಭುತವಾಗಿದ್ದು ನಮ್ಮ ದೇಶವೇ ಹೆಮ್ಮೆ ಪಡುವಂತಹ ಕಾರ್ಯವನ್ನು ಮಾಡಿದ್ದಾರೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಬಹಳ ಪ್ರೀತಿಯಿಟ್ಟು ಚೆಸ್ ಪಂದ್ಯಾಟವನ್ನು ಆಡಬೇಕು ಎಂದು ಶುಭವನ್ನು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕಾಪಿಕಾಡ್ ವಾರ್ಡ್‍ನ ಕಾರ್ಪೊರೇಟರ್ ಲ್ಯಾನ್ಸಿ ಲೋಟ್ ಪಿಂಟೋ, ಕರ್ನಾಟಕ ಬ್ಯಾಂಕ್‍ನ ಬಿಜೈ ಶಾಖೆಯ ಪ್ರಬಂಧಕ ಲೀನಾ ಮೊಂತೆರೋ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಂ| ಸಿಸ್ಟರ್ ಲೆತಿಷ್ಯಾ ಪಿಂಟೋ ಸರ್ವರನ್ನು ಸ್ವಾಗತಿಸಿದರು. ಸಹಶಿಕ್ಷಕ ಆನಂದ್ ವಂದಿಸಿದರು. ಶಿಕ್ಷಕಿ ದೋರತಿ ಪಾೈಸ್ ಕಾರ್ಯಕ್ರಮ ನಿರೂಪಿಸಿದರು.