Site icon Ullalavani

ವಿದ್ಯಾರ್ಥಿಗಳು ನಾಯಕತ್ವಗುಣ ಅಳವಡಿಸಿಕೊಳ್ಳಿ : ಕೆ.ರವೀಂದ್ರ ರೈ

UN NETWORKS

ಹರೇಕಳ: ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ, ಇಂತಹ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಪೂರಕ ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ಅಭಿಪ್ರಾಯಪಟ್ಟರು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಮಂತ್ರಿಗಳ ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಭಾಷಣ ಕೌಶಲ್ಯ,ಸಮಯ ಪ್ರಜ್ಞೆ, ಶಿಸ್ತು, ತಾಳ್ಮೆ, ಸದಾ ಹಸನ್ಮುಖಿಯಾಗಿರುವುದು ಬಹಳ ಪ್ರಾಮುಖ್ಯ. ಇಂತಹ ಗುಣಗಳನ್ನು ಅಳವಡಿಸಿಕೊಂಡಾಗ ಶಾಲೆ ಉತ್ತಮ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂದರು.

ವಿದ್ಯಾರ್ಥಿ ಸಂಘ ನಾಯಕಿಯಾಗಿ ಪ್ರಿಯ, ಉಪಮುಖ್ಯಮಂತ್ರಿಯಾಗಿ ನಿಶಾನ್, ಪ್ರಧಾನ ಕಾರ್ಯದರ್ಶಿಯಾಗಿ ಧನ್ಯ, ಸಭಾಪತಿಯಾಗಿ ಶರಣ್ಯ, ವಿದ್ಯಾ ಮಂತ್ರಿಯಾಗಿ ನಿಶ್ಮಿತಾ, ಆರೋಗ್ಯ ಮಂತ್ರಿಯಾಗಿ ಬದ್ರುನ್ನೀಸ, ಕ್ರೀಡಾ ಮಂತ್ರಿಯಾಗಿ ಸ್ಟೀಪನ್ ಜೋಸ್ಟನ್ ಡಿ’ಸೋಜ, ಕೃಷಿ ಮಂತ್ರಿಯಾಗಿ ಅಭಿಲಾಷ್, ಪ್ರವಾಸ ಮಂತ್ರಿಯಾಗಿ ಲಾವಣ್ಯ, ವಾರ್ತಾ ಮಂತ್ರಿಯಾಗಿ ಸುಷ್ಮಿತಾ, ಆಹಾರ ಮಂತ್ರಿಯಾಗಿ ರಶ್ಮಿತಾ, ಗೃಹ ಮಂತ್ರಿಯಾಗಿ ಕಾವ್ಯಶ್ರೀ, ಪೀಠೋಪಕರಣ ಮಂತ್ರಿಯಾಗಿ ಪ್ರಜ್ವಲ್ ನಾಯಕ್, ಸಾಂಸ್ಕೃತಿಕ ಮಂತ್ರಿಯಾಗಿ ವೀಕ್ಷಿತಾ, ನೀರಾವರಿ ಮಂತ್ರಿಯಾಗಿ ಶ್ರೇಯಸ್, ಭಿತ್ತಿ ಪತ್ರಿಕೆ ಮಂತ್ರಿಯಾಗಿ ನಿರೀಕ್ಷಾ, ಸ್ವಚ್ಛತಾ ಮಂತ್ರಿಯಾಗಿ ಆಶೀಫ್, ವಿರೋಧ ಪಕ್ಷದ ನಾಯಕನಾಗಿ ಅಕ್ಷಯ್, ಕಾರ್ಯಕ್ರಮ ನಿರ್ವಹಣಾ ಸಮಿತಿಯ ಸಂಚಾಲಕರಾಗಿ ವಚನ್ ಶೆಟ್ಟಿ, ಶಿಸ್ತು ಪಾಲನಾ ಸಮಿತಿಯ ಸಂಚಾಲಕರಾಗಿ ಹಂಸ, ಸಮಯ ಪಾಲನ ಸಮಿತಿಯ ಸಂಚಾಲಕರಾಗಿ ಅಕ್ಷಿತಾ ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕರುಗಳಾದ ಉಷಾಲತ, ಮೋಹಿನಿ, ರವಿಶಂಕರ್, ಕುಮುದ, ನೂತನ, ಸ್ಮಿತಾ ಇವರುಗಳು ಉಪಸ್ಥಿತರಿದ್ದರು.

ಹಿಂದಿ ಶಿಕ್ಷಕರಾದ ಶಿವಣ್ಣ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Exit mobile version