UN NETWORKS
ಇರಾ: ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ-ಕಲ್ಲಾಡಿ ಇದರ ನೂತನ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಆರ್. ಕರ್ಕೇರ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ತನಿಯಪ್ಪ ಎಚ್.ಹಲಸಿನಡಿ, ಉಪಾಧ್ಯಕ್ಷರಾಗಿ ಪಿ.ರಾಮಕೃಷ್ಣ ಸೂತ್ರಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಸೂತ್ರಬೈಲು, ಜತೆ ಕಾರ್ಯದರ್ಶಿಯಾಗಿ ಗಣೇಶ್ ಕಿನ್ನಿಮಜಲು, ಹರೀಶ್ ಇರಾ, ಮಾಧವ ಸೇರಿಗಾರಬೈಲು,ಕೋಶಾಧಿಕಾರಿಯಾಗಿ ವಾಮನ ಡಿ. ಆಯ್ಕೆಯಾಗಿದ್ದಾರೆ.
ಗುರಿಕಾರರಾದ ನಾಗೇಶ್ ಗುರಿಕಾರ ಕಲ್ಲಾಡಿ, ಸತೀಶ್ ಗುರಿಕಾರ, ರಾಮ ಗುರಿಕಾರ ಚಟ್ಟೆಕಲ್ಲು, ಪ್ರಮುಖರಾದ ವೈ.ಬಿ.ಸುಂದರ್ ಇರಾ, ಗೋಪಾಲ ಅಶ್ವತ್ಥಡಿ, ಪ್ರವೀಣ್ ವೈ.ಬಿ, ಸ್ಮಿತಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು. ರಾಮಕೃಷ್ಣ ಸೂತ್ರಬೈಲು, ಪ್ರತಾಪ್‍ಚಂದ್ರ, ಉಷಾ ಜಗದೀಶ್ ಲೆಕ್ಕಪತ್ರ ವಾಚಿಸಿದರು. ಸ್ವಜಾತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.