Site icon Ullalavani

ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಸ್ವರೂಪ ಬದಲಿಸುವ ಯೋಜನೆ ಇದೆ : ಡಾ. ಜಯಮಾಲ

UN NETWORKS

ಬಾಳೆಪುಣಿ : ಅಂಗನವಾಡಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿಗಳ ಸ್ವರೂಪ ಬದಲಾಯಿಸುವ ಮಹತ್ವಾಂಕಾಕ್ಷಿ ಯೋಜನೆಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಸರಕಾರ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರಿಗೆ ಕಳೆದ ಫೆಬ್ರವರಿಯಲ್ಲಿ ವೇತನ ಪರಿಷ್ಕರಣೆ ಮಾಡಿದೆ.ಪೋಷಕರು ಮಕ್ಕಳ ಆರೋಗ್ಯದ ಕುರಿತು ನಿವಾ ಇಡುವಂತೆಯೇ ಅಂಗನವಾಡಿಯಲ್ಲಿ ನೈರ್ಮಲ್ಯ ಕಾಪಾಡುವುದು ಶಿಕ್ಷಕಿಯರು ಹಾಗೂ ಸಹಾಯಕಿಯರ ಆದ್ಯ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಭಾಭವನದಲ್ಲಿ ಗುರುವಾರ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 60000 ಅಂಗನವಾಡಿಗಳಿದ್ದು 3331ಮಿನಿ ಅಂಗನವಾಡಿಗಳು, 100ಮೊಬೈಲ್ ಅಂಗನವಾಡಿಗಳಿದೆ. ನಗರಕ್ಕೆ 250ಹೊಸ ಅಂಗನವಾಡಿ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿಯೇ 500ಕ್ಕೂ ಹೆಚ್ಚು ಅಂಗನವಾಡಿಗಳಿವೆ. ನಾವು ಹಾಲು ಉಪ್ಪಿಟ್ಟಿಗಾಗಿಯೇ ಅಂಗನವಾಡಿಗೆ ಹೋಗುತ್ತಿದ್ದೆವು. ಅದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಹಿಂದಿನ ಸರ್ಕಾರ ಮಕ್ಕಳಿಗೆ ಹಾಲು, ಮೊಟ್ಟೆ ಯೋಜನೆ ಜಾರಿಗೆ ತಂದು ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಕೆಲಸ ಮಾಡಿದೆ. ಅತಿ ಮುಖ್ಯವಾಗಿ ಹಿಂದಿನ ಸರಕಾರದ ಆಡಳಿತ ನೇತೃತ್ವ ವಹಿಸಿದ್ದ ಸಿದ್ಧರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡಿದರು ಎಂದು ಹೆಳಿದರು.

ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಮಾತನಾಡಿ ನನ್ನ ವ್ಯಾಪ್ತಿಯಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಕೆಡುಕಾಗುವ ಚಟಗಳಾದ ಗುಟ್ಕಾ ಮೊದಲಾದ ಪದಾರ್ಥಗಳನ್ನು ನಿಷೇಧಿಸುವ ಕುರಿತಾಗಿ ಕಾನೂನನ್ನು ತರುವ ಯೋಜನೆ ಇದ್ದು ನನ್ನ ಖಾತೆಯಲ್ಲದಿದ್ದರೂ ನನ್ನ ಖಾತೆಯಡಿ ತಂದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಪಡಲಿದ್ದೇನೆ. ನಿಷೇಧಕ್ಕೆ ಸಂಬಂಧಿಸಿ ಶೀಘ್ರವೇ ಆ ಕುರಿತಾದ ಕಾನೂನು ಪ್ರಕಟಿಸಲಿದ್ದೇವೆ. ಮಳೆಗಾಲದಲ್ಲಿ ಆಟಿ ತಿಂಗಳಲ್ಲಿ ಅನ್ನಆಹಾರ ತಿಂಡಿ ತಿನಿಸು ಹೇಗಿತ್ತು ಮತ್ತು ಹಿಂದಿನ ಸಂಸ್ಕಾರ ಸಂಸ್ಕೃತಿ ತಿಳಿಯಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದು ನುಡಿದರು.ಮಾಜಿ ಸಚಿವ ಬಿ. ರಮನಾಥ ರೈ ಮಾತನಾಡಿದರು.ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟುಗೋಳಿ, ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾವೆ, ಶಾಲಾ ಗೌರವ ಸಲಹೆಗಾರ ರಮೇಶ್ ಶೇಣವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಮಂಗಳೂರು ಸಿಡಿಪಿಒ ಶ್ಯಾಮಲಾ, ಬಂಟ್ವಾಳ ತಾಲೂಕು ಸಿಡಿಪಿಒ ಮಲ್ಲಿಕಾ, ಎಪಿಎಂಸಿ ಮಾಜಿ ಸದಸ್ಯ ಉಮ್ಮರ್ ಪಜೀರು, ಹೂ ಹಾಹುಕವ ಕಲ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ರಾಜಗೋಪಾಲ ಭಟ್, ಅಬೂಬಕ್ಕಾರ್, ಅರುಣ್ ವಿಕ್ಟರ್, ಬಶೀರ್, ನರಿಂಗಾನ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ,ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು ಹಾಗೂ ಹಿರಿಯ ಮುಖಂಡ ಪದ್ಮನಾಭ ನರಿಂಗಾನ, ಉಪಸ್ಥಿತರಿದ್ದರು. ಶಾಲಾಭಿವೃದ್ದಿ ಸಮಿತಿ ವತಿಯಿಂದ ಸಚಿವೆ ಡಾ. ಜಯಮಾಲ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ. ಎಸ್.ಗಟ್ಟಿ ಸ್ವಾಗತಿಸಿದರು. ವಿಟ್ಲ ಸಿಡಿಪಿಒ ಸುಧಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.

ಹಿಂದಿನ ಕಾಲದಲ್ಲಿ ತುಳುನಾಡಿನ ಶ್ರೇಷ್ಠ ಆಟವಾದ ಚೆನ್ನೆಮಣೆ ಬಹಳ ವರ್ಷಗಳ ನಂತರ ಆಡಿದೆ. ಕಾಲ ಬದಲಾಗುತ್ತಿದೆ. ಹಾಗಿದ್ದರೂ ತುಳುನಾಡಿನಲ್ಲಿದ್ದವರು ಆಟಿ ತಿಂಗಳನ್ನು ನೆನಪು ಮಾಡಿಕೊಳ್ಳದಿದ್ದರೆ ಜೀವನ ಕಷ್ಟಕರ, ನೆನಪು ಮಾಡಿಕೊಳ್ಳಲೇಬೇಕು. ಯಾಕೆಂದರೆ ನಾವು ಬೆಂಗಳೂರಿನಲ್ಲಿ ಇದ್ದರೂ ತಿಂಗಳಿಗೆ ಎರಡು ಬಾರಿ ಪತ್ರೊಡೆ ಮಾಡಿ ತಿನ್ನುತ್ತೇವೆ. ಅಂತಹ ತಿನಿಸುಗಳು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ, ಇಟ್ಟಿದೆ. ಅದು ನಮ್ಮ ಹಿರಿಯರಿಂದ ನಾವು ಕಲಿತುಕೊಂಡು ಬಂದ ಸತ್ಯ. ಇಲ್ಲಿನ ಮಹಿಳೆಯರು ಆಟಿಡೊಂಜಿ ಕೂಟಕ್ಕೆ ತಯಾರಿಸಿದ ಪ್ರತಿ ಅಡುಗೆ ಚೆನ್ನಾಗಿ ಸೊಗಸಾಗಿ ಮಾಡಿದ್ದೀರಿ. ಅನ್ನಪೂರ್ಣೇ ಇಲ್ಲೇ ನೆಲೆಯಾಗಿದ್ದು ನಾಡಿನ ಎಲ್ಲ ಹೆಣ್ಮಕ್ಕಳಲ್ಲಿ ಅನ್ನಪೂರ್ಣೆಯ ಅಂಶ ಮೈಗೂಡಿದೆ.
ಡಾ. ಜಯಮಾಲ
ಸಚಿವೆ

ಸರಕಾರಿ ಶಾಲೆಗಳಲ್ಲಿ ಸೀಟು ಬೇಕು ಎಂದು ಕೇಳಿಕೊಂಡು ಬಂದಾಗ ಇಲ್ಲ ಎನ್ನುವ ಹಕ್ಕು ಯಾರಿಗೂ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಇಲ್ಲದಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ವೇತನ ಹೆಚ್ಚಿಸಿತ್ತು. ಮಾತೃಪೂರ್ಣ ಯೋಜನೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದರೂ ಕರಾವಳಿ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಸಕ್ಸಸ್ ಕಾಣಲಿಲ್ಲ. ಅದಕ್ಕಾಗಿ ಸ್ವಲ್ಪ ಬದಲಾವಣೆ ಮಾಡಿದರೆ ಉತ್ತಮ.
ಯು.ಟಿ. ಖಾದರ್
ಸಚಿವರು

Exit mobile version