UN NETWORKS
ಉಳ್ಳಾಲ: ವಿದ್ಯಾರ್ಥಿಗಳು ಎಂದಿಗೂ ಬಡವರು ಅನ್ನುವ ಕೀಳರಿಮೆ ಬೆಳೆಸದಿರಿ, ಬಡತನವನ್ನು ಮೆಟ್ಟಿ ನಿಲ್ಲುವಂತೆ ಕಿಟೆಲ್ ವಿದ್ಯಾ ಸಂಸ್ಥೆ ಪ್ರೋತ್ಸಾಹಿಸುತ್ತಿರುವುದನ್ನು ಉಪಯೋಗಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆದು ಜೀವನದಲ್ಲಿ ಯಶಸ್ವಿಯಾಗಿ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.
ವಿದ್ಯಾರ್ಥಿಗಳು ಬಡವರಾದರೂ ಮನಸ್ಥಿತಿಯಲ್ಲಿ ಕುಗ್ಗದೆ, ಯಶಸ್ಸಿನ ಹಾದಿಯಲ್ಲಿ ಬೆಳೆಯಬೇಕಿದೆ. ಬಡತನವನ್ನು ಮೆಟ್ಟಿ ನಿಲ್ಲುವಂತೆ ಪ್ರೋತ್ಸಾಹಿಸುತ್ತಿರುವ ಸಂಸ್ಥೆಯು ಸರಕಾರದ ಕಲ್ಪನೆಗಿಂತ ಮೊದಲೇ ಬಿಸಿಯೂಟವನ್ನು ಆರಂಭಿಸಿರುವುದು ಶ್ಲಾಘನೀಯ. ಮುಚ್ಚುತ್ತಿರುವ ಕನ್ನಡ ಶಾಲೆಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯನ್ನು ಇಟ್ಟುಕೊಂಡು ಸಂಸ್ಥೆ ಬೆಳೆಯುತ್ತಿದೆ. ಇಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳು ಮನುಷ್ಯತ್ವವನ್ನು ಬೆಳೆಸಿಕೊಂಡು ಪದವಿಯನ್ನು ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಿ ಬೆಳೆಯಿರಿ ಎಂದು ಹಾರೈಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಎಕ್ಕೂರು ಫಿಶರೀಸ್ ಕಾಲೇಜಿನ ಪ್ರೊ. ಶಿವಕುಮಾರ್ ಮಗದ , ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಮುಖ್ಯ ಅತಿಥಿಗಳಾಗಿದ್ದರು. ಗೋರಿಗುಡ್ಡೆಯ ಕಿಟೆಲ್ ಮೆಮೋರಿಯಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಯಾನ ಜ್ಯೋತಿ ಫ್ರ್ಯಾಂಕ್ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಚರಣ್.ಜಿ ಉಪಸ್ಥಿತರಿದ್ದರು.
ಕಾಲೇಜಿನ ಹಳೇ ವಿದ್ಯಾರ್ಥಿನಿ ಚಾರ್ಟಡ್ ಅಕೌಂಟೆಂಟ್ ಆಗಿರುವ ಲಾವಣ್ಯ , ಬಡತನದಲ್ಲಿಯೇ ಕಲಿತು ಶಿಕ್ಷಣ ಪೂರೈಸಿ ಸದ್ಯ ಚಾರ್ಟಡ್ ಅಕೌಂಟೆಂಟ್ ಆಗಿರುವ ಶಶಿಧರ್ ಕಜೆಕಾರ್ ಬದುಕಿನ ಯಶಸ್ಸಿನ ಹಾದಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಸರಕಾರದಿಂದ ನಿಯುಕ್ತಿಗೊಂಡು ಒಂದು ವರ್ಷ ಸೇವೆ ಸಲ್ಲಿಸಿ ವಾಪಸ್ಸಾಗುತ್ತಿರುವ ಶಿಕ್ಷಕಿಂiÀiರಾದ ಎಡ್ಲಿನ್ ಮತ್ತು ಲಿಡ್ವಿನ್ ಅವರನ್ನು ಸನ್ಮಾನಿಸಲಾಯಿತು.
ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಠಲ್ ಅಬೂರ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ನಿರ್ವಹಿಸಿದರು. ಗಾಯತ್ರಿ ವಂದಿಸಿದರು.