UN NETWORKS
ಮುಂಬಯಿ: ಮುಂಬಯಿನಲ್ಲಿ ವೃತ್ತಿಯಲ್ಲಿ ಇಂಟೀರಿಯರ್ ಇಂಜಿನಿಯರ್ ಆಗಿರುವ ಉಡುಪಿ ಸಮೀಪದ ಕುದಿ ಗ್ರಾಮದ ಕುದಿ ಸುಧಾಕರ ಶೆಟ್ಟಿ ಮತ್ತು ಕುದಿ ಸಂತೋಷ್ ಶೆಟ್ಟಿ ಸಹೋದರರ ಪಿತ್ರಾರ್ಜಿತವಾಗಿ ಬಂದ ಒಂದು ಕಾಲದಲ್ಲಿ ನಮಗೆ ಜೀವನಾಡಿ ಆಗಿದ್ದ ತಮ್ಮ ಗದ್ದೆಗಳನ್ನು ಹಡಿಲು ಬಿಡದೆ ಮುಂಬಯಿಯಿಂದ ಆಗಮಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
ಈ ವರ್ಷಉತ್ತಮ ಮುಂಗಾರು ಮಳೆಯಿಂದ ಕೃಷಿಗೆ ಅನುಕೂಲಕರವಾದ ಕರಾವಳಿ ಭಾಗದಲ್ಲಿ ಹಡಿಲು ಬಿದ್ದ ಕೃಷಿಭೂಮಿಯಲ್ಲಿ ಪುನಃ ಭತ್ತದ ನೇಜಿ ನಾಟಿಯಿಂದ ಹಸನು ಗೊಳಿಸಿರುವುದು ಗೋಚರಿಸುತ್ತಿಲ್ಲ. ರೈತಾಪಿ ವರ್ಗದಯುವಜನತೆ ಶೈಕ್ಷಣಿಕ ಸುಶಿಕ್ಷಿತರಾಗುತ್ತಿದ್ದಂತೆ ನಗರ ಪ್ರದೇಶ ಸೇರಿದರು ಅಲ್ಲೊಂದು ಇಲ್ಲೊಂದು ಹಿರಿಯರಿಂದ ಬಂದ ಕೃಷಿಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ.
ಸರಕಾರ ರೈತರ ಋಣ ಪರಿಹಾರಕ್ಕಾಗಿ ಸಾಲಮನ್ನ ಯೋಜನೆಗಳನ್ನು ಜಾರಿಗೆ ತಂದರೂ ಇದರ ಜೊತೆಯಲ್ಲಿ ಕೃಷಿ ಮಹಿಳಾ ಕಾರ್ಮಿಕರನ್ನು ನಾವು ಪ್ರೋತ್ಸಾಹಿಸ ಬೇಕಾಗಿ ಈ ಸಹೋದರರು 2.5 ಎಕ್ರೆಕೃಷಿಗದ್ದೆಯಲ್ಲಿ 1 ಎಕ್ರೆಯಲ್ಲಿ ಬೀಜ ಬಿತ್ತನೆ ಕೃಷಿಯನ್ನು 1.5 ಎಕ್ರೆಯಲ್ಲಿ ನಾಟಿಯನ್ನು 15 ಮಹಿಳಾ ಕಾರ್ಮಿಕರಿಂದ ಕೃಷಿ ಕಾಯಕವನ್ನು ಕೈಗೊಂಡಿರುವುದು ಸುತ್ಯರ್ಹ ಇದಕ್ಕೆ ಇವರ ಸಹೋದರೀಯ ಮೇಲುಸ್ತುವಾರಿಯೂ ಇದೆ.
ಸುಮಾರು ಮೂರು ತಲೆಮಾರಿನಿಂದ ನಮ್ಮ `ಕುದಿ ಮುಟ್ಟಿಕಲ್ಲುಚೈತ್ರ’ ಮನೆಯಲ್ಲಿ ಕೃಷಿ ಕಾರ್ಯಕ್ಕೆ ಸಹಕರಿಸುತ್ತಿದ್ದ ಗಿರಿಜಾ ಸೂರ್ಯ ಮೂಲ್ಯ ಮತ್ತು ಜಲಜ ಪಪ್ಪು ಮೂಲ್ಯ ಇವರು ಸುಮಾರು 75 ರಿಂದ 80 ವರ್ಷದ ವಯಸ್ಸಿನವರಾಗಿದ್ದರೂ ಇಂದಿಗೂ ಕೃಷಿ ಕಾಯಕವನ್ನು ಮಾಡುತ್ತಿದ್ದು ಇವರನ್ನು ಹಸಿರುಸೀರೆ ಕಿಂಚಿತ್ ಧನಸಹಾಯ ಫಲಪುಷ್ಪಗಳಿಂದ ಗೌರವಿಸಲಾಯಿತು. ಸುದೀರ್ಘ ಕಾಲದಿಂದ ಆರೋಗ್ಯವಂತರಾಗಿ ಕೃಷಿ ಕಾಯಕವನ್ನೇ ಜೀವನೋಪಾಯವಾಗಿ ಮಾಡಿಕೊಂಡ ಇವರ ಬೆನ್ನು ಬಾಗಿದೆ. ಕಣ್ಣು ಮಂಜಾಗಿದೆಚರ್ಮ ಸುಕ್ಕುಗಟ್ಟಿದೆ. ಕೈ ಕಾಲಿನಲ್ಲಿ ಶಕ್ತಿ ಗುಂದಿದ ಇವರು ಗೌರವಿಸಿದಕ್ಕೆ ಹರ್ಷ ವ್ಯಕ್ತ ಪಡಿಸುತ್ತಾ ಕೃಷಿ ಕಾರ್ಯದಿಂದ ನಿವೃತ್ತಿಯ ಇಂಗಿತವನ್ನು ವ್ಯಕ್ತಪಡಿಸಿದರು.
ನಾಟಿಯಲ್ಲಿ ತೊಡಗಿದ್ದ ಎಲ್ಲಾ ರೈತಾಪಿ ಮಹಿಳೆಯರನ್ನು ಹಸಿರು ಶಾಲಿನಿಂದ ಗೌರವಿಸಲಾಯಿತು. `ನಮ್ಮಕುಟುಂಬದಿಂದ ಮೂರುತಲೆಮಾರಿನ ಹಿರಿಯರಿಂದ ಕೃಷಿ ಕಾಯಕಕ್ಕೆ ಸಹಕರಿಸುತ್ತಿದ್ದ ಮಹಿಳೆಯರನ್ನು ಗೌರವಿಸುತ್ತಿರುವುದು ನಮ್ಮ ಹಿರಿಯರ ಆಶೀರ್ವಾದದಿಂದ ಅವರಿಗೆ ಸಂದ ಗೌರವ ಎಂದು ಕುದಿ ಸಂತೋಷ್ ಶೆಟ್ಟಿ ಮುಂಬಯಿ ತನ್ನ ಸಾರ್ಥಕತೆಯನ್ನು ನೆನೆದರು.
ಇಂತಹ’ ರೈತಾಪಿ ಕೃಷಿ ಕಾರ್ಮಿಕ ಮಹಿಳೆಯರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವುದು ಹಾಗೂ ಯುವ ಪೀಳಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳದಿರುವುದು ಕೃಷಿಯಿಂದರೈತಾಪಿ ವರ್ಗ ಹಿಂಜರಿದರೆ ಮುಂದೆದೇಶದಲ್ಲಿ ಶುದ್ಧ ಆಹಾರದ ಕೊರತೆಯಿಂದ ಜನತೆಯ ಆಯುಷ್ಯಕ್ಕೆ ಕುಂಠಿತ ಆಗಬಹುದು ಎಂದು ಕೃಷಿ ಕಾರ್ಮಿಕ ಮಹಿಳೆಯರನ್ನು ಗೌರವಿಸಿದ ಇಂಜಿನಿಯರ್ ಸೆಲ್ಯೂಶನ್ 1 ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಕುದಿ ಸುಧಾಕರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ದೇಶರಕ್ಷಕ, ಶಿಕ್ಷಕ, ವೈದ್ಯ, ರೈತ ಈ ದುಡಿಮೆಯು ಸೇವಾ ಮನೋಭಾವದ ಪವಿತ್ರ ಕಾರ್ಯಗಳು ಎಂದು ನಮ್ಮ ತಂದೆ (ನಿವೃತ್ತ ಮುಖ್ಯ ಶಿಕ್ಷಕರು) ಯಾವಾಗಲೂ ಹೇಳುವರು. ದೇಶದಲ್ಲಿರೈತರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ರೈತಾಪಿ ಕೃಷಿ ಕಾರ್ಮಿಕರ ಮಹಿಳೆಯರನ್ನು ಕೇಳುವವರೇ ಇಲ್ಲ. ಇಂತಹ ಭೂಮಿ ತಾಯಿಯ ಮಕ್ಕಳಾದ ರಾಮಾಯಣದ ಸೀತಾ ಮಾತೆಯಂತೆ ಮಣ್ಣಿನಕುವರಿಯರ ಬಗ್ಗೆ ಸರಕಾರ ಗಮನ ಹರಿಸಬೇಕು ಎನ್ನುತ್ತಾ ಮುಂದಿನ ದಿನಗಳಲ್ಲಿ ನಮ್ಮ ಕುದಿ ಮುಟ್ಟಿಕಲ್ಲು ಮನೆಯಲ್ಲಿ ಪ್ರತಿ ಆದಿತ್ಯವಾರ ಹಿರಿಯ ಕೃಷಿ ಕಾರ್ಮಿಕ ಮಹಿಳೆಯರಿಗೆ ಆರೋಗ್ಯ ತಪಾಸಣೆ, ಔಷಧ, ಆರೋಗ್ಯ ಮಾಹಿತಿ ಸೇವಾ ರೂಪವಾಗಿ ನೀಡಲಾಗುವುದು ಎಂದು ಡಾ| ತ್ರಿಶಾ ಎಸ್.ಶೆಟ್ಟಿ ತಿಳಿಸಿದರು.
ನಾಡಿದ ಹೆಸರಾಂತ ಕೃಷಿಕ, ಚಿಂತಕ, ಸಾಹಿತಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ಅವರ ಸಹೋದರರರಾದ ಸುಧಾಕರ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಇವರು ಸದಾ ತೆರೆಮರೆಯ ಸಾಧಕರು. ಇವರ ಸಾಧನೆ ಗುರುತಿಸಿ ಬಂಟ್ಸ್ ಸಂಘ ಮುಂಬಯಿ ಬಂಟರ ಭವನದಲ್ಲಿ ಸನ್ಮಾನಿಸಿದೆ.