Site icon Ullalavani

ನೀರಿನಲ್ಲಿ ಮುಳುಗಿ ಯುವಕ ಸಾವು

UN NETWORKS

ಮೊಂಟೆಪದವು: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಉಳ್ಳಾಲ ಅಳೇಕಲದ ಖಲೀಲ್ (30) ಮೃತರು. ಉಳ್ಳಾಲ ಅಳೇಕಲದ ಐದು ಮಂದಿಯ ಯುವಕರ ತಂಡ ಮೊಂಟೆಪದವಿನ ಗುದ್ರುವಿನಲ್ಲಿರುವ ಈಜು ಕೊಳದಲ್ಲಿ ಆಟವಾಡುತಿದ್ದ ಸಂದರ್ಭ ಖಲೀಲ್ ನೀರಿನಲ್ಲಿ ಮುಳುಗಿದ್ದಾರೆ. ಅದು ತಕ್ಷಣಕ್ಕೆ ಯಾರ ಅರಿವಿಗೂ ಬಂದಿರಲಿಲ್ಲ ಎನ್ನಲಾಗಿದೆ.

ಸ್ವಲ್ಪ ಹೊತ್ತಿನಲ್ಲಿಯೇ ಖಲೀಲ್ ಅವರನ್ನು ಹುಡುಕುವ ಯತ್ನ ನಡೆದಿದ್ದು, ಸುಮಾರು ಅರ್ಧ ತಾಸಿನ ಬಳಿಕ ಖಲೀಲ್ ಅವರನ್ನು ಕೊಳದ ಆಳದಿಂದ ಹೊರತೆಗೆಯಲಾಗಿದೆ. ಆ ವೇಳೆ ಅವರು ಮೃತಪಟ್ಟಿದ್ದರು ಎಂದು ಜಮೀನಿನ ಸಂಬಂಧಿಕರು ಕೊಣಾಜೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Exit mobile version