UN NETWORKS
ಮಂಗಳೂರು: ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಮಾಡಬೇಕೆಂದು DK HUPTOA ದಕ್ಷಿಣ ಕನ್ನಡ ಹಜ್ಜ್ ಮತ್ತು ಉಮ್ರಾ ಟೂರ್ ಅಪರೇಟರ್ ಸಂಘ ಒತ್ತಾಯಿಸಿದೆ.
ಪ್ರಸ್ತುತ, ಯಾತ್ರಾರ್ಥಿಗಳು ಹಿರಿಯ ನಾಗರಿಕರಾಗಿರುವುದರಿಂದ, ಮಂಗಳೂರಿನಿಂದ ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ ಸುಮಾರು 400 ಕಿ.ಮೀಟರ್ ನಷ್ಟು ಯಾ ದೂರದ ಮುಂಬೈ ನಿಂದ ಬಸ್ಸು ಮಾರ್ಗ ಯಾ ಖಾಸಗಿ ವಾಹನ ಯಾ ದೇಶೀಯ ವಿಮಾನ ಮೂಲಕ ಬೆಂಗಳೂರಿಗೆ ತೆರಳಿ ಬೆಂಗಳೂರಿನಲ್ಲಿ ಉಳಿದು ನಂತರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾತ್ರಾರ್ಥಿಗಳು ಹೊರಡಬೇಕಾಗುತ್ತದೆ.
ಈ ಪ್ರಕ್ರಿಯೆ ಯಾತ್ರಾರ್ಥಿಗಳಿಗೆ ಹೆಚ್ಚಿನ ತ್ರಾಸದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ತಾವು ವಿಮಾನ ಪ್ರಾಧಿಕಾರಕ್ಕೆ ಶಿಫಾರಸು ಮಾಡಿ ಉಮ್ರಾ ಯಾತ್ರಾರ್ಥಿಗಳ ಇದಲ್ಲದೆ NRI ಅನಿವಾಸಿ ಉಧ್ಯಮಿಗಳ, ಸೌದಿ ಉದ್ಯೋಗಸ್ತರ ಹಾಗೂ ಇತರ ಪ್ರಯಾಣಿಕರ ಪ್ರಯಾಣ ನಿರ್ವಹಣೆಗಾಗಿ ವಾರದಲ್ಲಿ ಕನಿಷ್ಟ ಎರಡು ವಿಮಾನ ಯಾನಗಳನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆದ್ದಾಕ್ಕೆ ಅಥವ ಮದೀನಾಕ್ಕೆ ನೇರ ಯಾನ ಹೊರಡುವಂತೆ ವ್ಯವಸ್ಥೆಗೊಳಿಸಬೇಕಾಗಿ ಶೀಫಾರಸು ಕ್ರಮ ಕೈಗೊಳ್ಳುವರೇ ವಿನಂತಿಸಿ
ಸಂಘದ ಸ್ಥಾಪಕರಾದ ಝಾಕೀರ್ ಇಕ್ಲಾಸ್ ಸಚಿವರಿಗೆ ಸಮಸ್ಯೆ ವಿವರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಝಕೀರ್ ಹುಸೇನ್ ಕೃಷ್ಣಾಪುರ, ಅದ್ಯಕ್ಷ ಅನ್ಸಾರ್ ತಂಗಳ್, ಹಸನ್ ಸಾಗ್, ಮೊಯ್ದೀನ್ ಮುಕ್ಕ, ಚ್ಚೈಬಾವು ಕ್ಲಾಸಿಕ್ ಹಾಗೂ ಇತರರು ಉಪಸ್ಥಿತರಿದ್ದರು.