Site icon Ullalavani

ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

UN NETWORKS

ದೇರಳಕಟ್ಟೆ: ಮಲ್ಟಿಪಲ್ ಮೈಲೋಮಾ(ರಕ್ತ ಕ್ಯಾನ್ಸರ್) ಬಳಲುತ್ತಿದ್ದ ರೋಗಿಯ ಅಸ್ಥಿಮಜ್ಜೆ ಕಸಿ ವಿಧಾನವನ್ನು ಮಾಡುವಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರ ತಂಡ ಪ್ರಥಮ ಭಾರಿಗೆ ಯಶಸ್ವಿಯಾಗಿದೆ.

ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಲೀಲಾ ನಾರಾಯಣ ಶೆಟ್ಟಿ ಕ್ಯಾನ್ಸರ್ ಕೇಂದ್ರದ ಮೆಡಿಕಲ್ ಅಂಕೊಲಾಜಿ ತಜ್ಞರಾದ ಡಾ.ವಿಜೀತ್ ಶೆಟ್ಟಿ ಹಾಗೂ ಅವರ ನೇತೃತ್ವದ ವೈದ್ಯಕೀಯ ತಂಡ ಯಶಸ್ವಿ ಕಾಂಡಕೋಶ ಕಸಿ ವಿಧಾನವನ್ನು ಪೂರೈಸಿದೆ.ಬೆಳ್ತಂಗಡಿ ತಾಲೂಕಿನ 55 ರ ಹರೆಯದ ವ್ಯಕ್ತಿಯೋರ್ವರು ಕಳೆದ ಮೂರು ವರ್ಷಗಳಿಂದ ತೀವ್ರ ಬೆನ್ನುನೋವು ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದರು ಅವರ ಖಾಯಿಲೆ ಕುರಿತಾಗಿ ಕ್ಷೇಮ ಆಸ್ಪತ್ರೆಯಲ್ಲಿ ಹಲವು ಭಾರಿ ತಪಾಸಣೆ ನಡೆಸಿದಾಗ ಅವರಿಗೆ ರಕ್ತ ಕ್ಯಾನ್ಸರ್ ಇರುವುದಾಗಿ ಪತ್ತೆಯಾಗಿದೆ.

ಕಾಯಿಲೆ ಲಕ್ಷಣ:ಈ ವೇಳೆ ವಿಲಕ್ಷಣ ಪ್ಲಾಸ್ಮ ಕೋಶಗಳ ಅಸಹಜ ಬೆಳವಣಿಗೆಯಾಗಿ ಮೂಳೆ ಮಜ್ಜೆಯ ರಕ್ತದ ಉತ್ಪಾದನೆಯಲ್ಲಿ ಏರುಪೇರಾಗುತ್ತದೆ. ಈ ಸಂದರ್ಭ ಕ್ಲಪ್ತ ಕಾಲಕ್ಕೆ ಸೂಕ್ಷ್ಮ ಚಿಕಿತ್ಸೆ ದೊರೆದೇ ಇದಲ್ಲಿ ರಕ್ತ ಹೀನತೆ ಮೂತ್ರಪಿಂಡ ವೈಫಲ್ಯ ಮತ್ತು ಮೂಳೆಗಳ ಮುರಿತಕ್ಕೆ ಕಾರಣವಾಗುತ್ತದೆ.

ಅಟೊಲೋಗಸ್ ಚಿಕಿತ್ಸೆ ವಿಧಾನ
ಅಟೊಲೋಗಸ್ ಎಂಬುವುದು ಮಲ್ಟಿಪಲ್ ಮೈಲೋಮಾ ಖಾಯಿಲೆಗೆ ಸುಧಾರಿತ ಚಿಕಿತ್ಸಾ ಕಾರ್ಯವಿಧಾನವಾಗಿದೆ. ರೋಗಿಗಳ ಖಾಯಿಲೆ ಉಲ್ಬಣವಾಗದಂತೆ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಮೂರು ಹಂತದಲ್ಲಿ ಚಿಕಿತ್ಸೆ ನಡೆಸಲಾಗುತ್ತದೆ. ಬಾಹ್ಯ ರಕ್ತದ ಪೆರಿಫೆರಲ್ ಕಾಂಡಕೋಶದ ಸಂಗ್ರಹಣೆ, ಮಾರಣಾಂತಿಕ ಕೋಶಗಳ ನಿರ್ಮೂಲನೆ ಮಾಡಲು ಕೀಮೋ ಥೆರಫಿ ಚಿಕಿತ್ಸೆ, ರೋಗಿಯಲ್ಲಿನ ಮಾರಾಣಾಂತಿಕ ಕೋಶಗಳು ಮತ್ತೆ ಸಾಮಾನ್ಯ ಕೋಶಗಳಾಗಿ ಪರಿವರ್ತನೆಯಾಗುವಂತೆ ನೋಡಿಕೊಳ್ಳುವುದು.

ರಾಜ್ಯದಲ್ಲಿ ಬೆಂಗಳೂರಿನ ಕ್ಯಾನ್ಸರ್ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದ್ದು ಇದೀಗ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯಲ್ಲಿ ಈ ವಿಧಾನ ಕಂಡುಹಿಡಿದಿರುವುದು ಶ್ಲಾಘನೀಯ ಎಂದು ನಿಟ್ಟೆ ವಿವಿಯ ಸಹ ಕುಲಾಧಿಪತಿ ಡಾ,ಶಾಂತಾರಾಮ್ ಶೆಟ್ಟೆ ಅಭಿಪ್ರಾಯಪಟ್ಟಿದ್ದಾರೆ.
50 ರ ಹರೆಯದ ವ್ಯಕ್ತಿಗೆ ಚಿಕಿತ್ಸೆ ನೀಡುವುದು ಸ್ಪಲ್ಪ ಕಠಿಣ ಆದರೆ ಕ್ಷೇಮ ಆಸ್ಪತ್ರೆಯ ಆಂಕೊಲಾಜಿ ವಿಭಾಗ ಇದನ್ನು ಸವಾಲಾಗಿ ತೆಗೆದುಕೊಂಡು ಪರಿಹಾರವನ್ನು ಒದಗಿಸಿರುವುದು ಶ್ಲಾಘನೀಯ ಎಂದು ನಿಟ್ಟೆ ವಿವಿ ಕುಲಪತಿ ಡಾ,ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. ಕ್ಷೇಮ ವೈದ್ಯಕೀಯ ಕಾಲೇಜಿನ ಡಿನ್ ಡಾ.ಪಿ.ಎಸ್.ಪ್ರಕಾಶ್ ಕಾರ್ಯವನ್ನು ಅಭಿನಂದಿಸಿದ್ದಾರೆ.

ಕ್ಷೇಮ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ, ಶಿವಕುಮಾರ್ ಹಿರೇಮಠ್ ಆಸ್ಪತ್ರೆಯು ಆರೋಗ್ಯ ಭಾಗ್ಯ ಯೋಜನೆ ಮುಖಾಂತರ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿರುವುದಾಗಿ ಹೇಳಿದ್ದಾರೆ.

Exit mobile version