UN NETWORKS
ಮುಡಿಪು: ಮುಡಿಪು ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ರೂ. 2 ಕೋಟಿ ಅನುದಾನ ಹಾಗೂ ಕಾಲೇಜಿಗೆ ಉತ್ತಮ ಪ್ರಯೋಗಾಲಯವನ್ನು ಸರಕಾರ ಮಂಜೂರುಗೊಳಿಸಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ
ಅವರು ಕುರ್ನಾಡು ಗ್ರಾಮದ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿ ವಿಭಾಗದ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್‍ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಸರಕಾರ ಮಂಜೂರುಗೊಳಿಸಿದ ರೂ. 2 ಕೋಟಿ ಅನುದಾನ ಮಂಜೂರಾತಿಯ ಆದೇಶ ಪತ್ರವನ್ನು ಸಚಿವರು ಶಾಲಾ ಉಪನ್ಯಾಸಕರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಯಾಗಿ ಕುರ್ನಾಡು ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕುರ್ನಾಡು ಗ್ರಾ.ಪಂ ಅಧ್ಯಕ್ಷ ಶೈಲಜಾ.ಎಂ, ಸರಕಾರಿ ಪ್ರಥಮ ದರ್ಜೆ ಕಾಲೇಜು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ, ಫ್ರೌಡಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮರ್ ಪಜೀರ್, ಇರಾ ಗ್ರಾ,ಪಂ ಅಧ್ಯಕ್ಷ ಅಬ್ದುಲ್ ರಝಾಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಶಂಕರ್ ಭಟ್, ಮೂಸ ಕುಂಞ ಸಂಬರತೋಟ, ಅಬ್ದುಲ್ ಜಲೀಲ್ ಮೊಂಟುಗೋಳಿ, ಸೂಫಿ ಕುಂಞ, ಅಂದು ಕುಂಞ, ಪ್ರೌಡಶಾಲಾ ಉಪಪ್ರಾಂಶುಪಾಲ ಬಸವರಾಜು ಪಲ್ಲಕ್ಕಿ, ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಅಸ್ಫಾಕ್ ಅಹ್ಮದ್ ಎ. ಮ್ಯಾಗೇರಿ, ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಗಿರಿಧರ್ ರಾವ್ ಉಪಸ್ಥಿತರಿದರು.
ಉಪನ್ಯಾಸಕಿ ಶರಣ್ಯ ರೈ ಸ್ವಾಗತಿಸಿದರು. ಉಮೇಶ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು.