Site icon Ullalavani

ಮದ್ರಸ-ಮಸೀದಿಗಳಲ್ಲಿ ಬ್ಯಾರಿ ಭಾಷೆ ಬಳಸಿ: ಕರಂಬಾರ್ ಮುಹಮ್ಮದ್

UN NETWORKS

ಕೊಣಾಜೆ : ಬ್ಯಾರಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಮದ್ರಸ ಮತ್ತು ಮಸೀದಿಗಳ ಕಾರ್ಯಕ್ರಮಗಳಲ್ಲಿ ಬ್ಯಾರಿ ಭಾಷೆಯನ್ನು ಬಳಸಲು ಖತೀಬರು, ಮುಅಲ್ಲಿಮರು ಹಾಗೂ ಆಡಳಿತ ಕಮಿಟಿ ಮತ್ತು ಜಮಾಅತರು ಮುಂದಾಗಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಕರೆ ನೀಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ಸಹಕಾರದೊಂದಿಗೆ ರವಿವಾರ ಕೊಣಾಜೆ ಸಮೀಪದ ಅಸೈಗೋಳಿಯ ಲಯನ್ಸ್ ಸೇವಾ ಸದನದಲ್ಲಿ ಹಮ್ಮಿಕೊಂಡ `ಪೆರ್ನಾಲ್ ಸಂದೋಲ 2018′ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾರಿ ಅಕಾಡಮಿ ನೀಡಬೇಕು ಎಂಬ ಸರ್ವ ಬ್ಯಾರಿಗಳ ಕೂಗಿಗೆ 11 ವರ್ಷದ ಹಿಂದೆಯೇ ರಾಜ್ಯ ಸರಕಾರ ಅಕಾಡಮಿಯನ್ನು ನೀಡುವ ಮೂಲಕ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿದೆ. ಸರಕಾರ ಭಾಷೆಗೆ ಸಲ್ಲಿಸಿದ ಗೌರವವನ್ನು ಉಳಿಸಲು ಎಲ್ಲ ಬ್ಯಾರಿಗಳು ಪ್ರಯತ್ನಿಸಬೇಕು. ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಕವಿ, ಸಾಹಿತಿಗಳು, ಲೇಖಕರಲ್ಲದೆ ಬ್ಯಾರಿ ಸಮುದಾಯದ ಧಾರ್ಮಿಕ ವಿದ್ವಾಂಸರು, ಮುಖಂಡರ ಜವಾಬ್ದಾರಿ ಕೂಡಾ ಇದೆ. ಹಾಗಾಗಿ ಮದ್ರಸದ ಶಿಕ್ಷಣವಲ್ಲದೆ, ಮಸೀದಿಯ ಆಡಳಿತ, ದಾಖಲಾತಿ, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಬ್ಯಾರಿ ಭಾಷೆಗೆ ಆದ್ಯತೆ ನೀಡಬೇಕು ಎಂದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮೇಲ್ತೆನೆಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ, ಅಕಾಡಮಿಯ ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಅನ್ಸಾರ್ ಬೆಳ್ಳಾರೆ, ಮರಿಯಮ್ಮ ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಸ್ವಾಗತಿಸಿದರು. ಲೇಖಕ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿರು. ಮುಹಮ್ಮದ್ ಬಾಷಾ ನಾಟೆಕಲ್ ವಂದಿಸಿದರು.

ನುಡಿನಮನ: ಕಳೆದ ಮಂಗಳವಾರ ನಿಧನರಾದ ಹಿರಿಯ ಮುತ್ಸದ್ದಿ ಬಿ.ಎ.ಮೊಹಿದೀನ್ ಅವರಿಗೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಲಾಯಿತು.

ಕವಿಗೋಷ್ಠಿ: ಕವಿ ಶಂಸುದ್ದೀನ್ ಮಡಿಕೇರಿಯ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಲಿಕುಂಞ ಪಾರೆ, ಶರೀ ನಿರ್ಮುಂಜೆ, ಅಶ್ರ ಅಪೋಲೊ, ಮನ್ಸೂರ್ ಅಹ್ಮದ್ ಸಾಮಣಿಗೆ, ಮಿಸ್ರಿಯಾ ಪಜೀರ್, ಆಯಿಶಾ ಯು.ಕೆ.ಉಳ್ಳಾಲ, ಸೈ ಕುತ್ತಾರ್, ಶಮೀಮ್ ಕುಟ್ಟಿಕ್ಕಳ, ಅಬ್ದುಲ್ಲಾ ಮಡಿಕೇರಿ, ಹಂಝ ಮಲಾರ್, ರಫೀಕ್ ಪಾಣೇಲ ಕವನ ವಾಚಿಸಿದರು.

ಕವನ ರಚನಾ ಸ್ಪರ್ಧೆ: ಸ್ಥಳದಲ್ಲೇ ವಿಷಯ ಕೊಟ್ಟು ನಡೆಸಿದ ಕವನ ರಚನಾ ಸ್ಪರ್ಧೆಯಲ್ಲಿ ಮುಹಮ್ಮದ್ – ಪೈಝಲ್ ಕುಂಪಲ (ಪ್ರಥಮ), ಕ-ಶಿಖ ಬಜ್ಪೆ (ದ್ವಿತೀಯ), ಎಂ.ಆರ್. ಅಬ್ದುರ್ರಹ್ಮಾನ್ ಮಲಾರ್ (ತೃತೀಯ) ಬಹುಮಾನ ಪಡೆದರು. ಉಪನ್ಯಾಸಕರಾದ ಇಸ್ಮಾಯೀಲ್ ಟಿ. ಹಾಗೂ ನಿಯಾಝ್ ಪಿ. ತೀರ್ಪುಗಾರರಾಗಿ ಸಹಕರಿಸಿದ್ದರು

Exit mobile version