Site icon Ullalavani

ಹಳೆಕೋಟೆಯಲ್ಲಿ ವನಮಹೋತ್ಸವ

UN NETWORKS

ಉಳ್ಳಾಲ : ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಡ ಶಾಲೆ ಯಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಜನಾಬ್ ಮುಸ್ತಫಾ ಅಬ್ದುಲ್ಲರವರ ಅಧ್ಯಕ್ಷತೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಳ್ಳಾಲ ಕ್ರೇಂದ್ರ ಜುಮಾಮಸೀದಿ ಕಾರ್ಯದರ್ಶಿ ಜನಾಬ್ ಹಾಜಿ ಮಹಮ್ಮದ್ ತ್ವಾಹರವರು ಇಂದು ನಮ್ಮ ಅವ್ಯಶಕತೆಗಳ ದಾಗಿ ಮರಗಳ ನಾಶವಾಗುತ್ತಿದೆ ಮರ ನಾಶವಾದಲ್ಲಿ ಇನ್ನೆರಡು ಗಿಡಗಳನ್ನು ನೆಟ್ಟು ಪೋಷಿಸಿ ಅದನ್ನು ಮರವಾಗಿ ಬೆಳಸುವ ಮೂಲಕ ನಾವು ಕಾಡನ್ನು ಬೆಳಸಿ ನಾಡನ್ನು ಉಳಿಸಬೇಕಾಗಿದೆ ಎಂದರು .

ಶಾಲಾ ಮಕ್ಕಳ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಶಾಲಾಭಿವೃಧ್ಧಿ ಸಮಿತಿಯ ಉಪಾಧ್ಯಕ್ಷ ಜನಾಬ್ ಯು. ಎನ್ ಇಬ್ರಾಹಿಂ ಕೋಶಾಧಿಕಾರಿ ಅಬ್ದುಲ್ ಕರೀಂ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಗೆ ಆಡಳಿತಾಧಿಕಾರಿ ಜನಾಬ್ ಅಬ್ದುಲ್ ಲತೀಫ್ ರವರು ಮುಖ್ಯ ಅತಿಥಿಗಳಾಗಿದ್ದರು ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ವಿಶಿಷ್ಠ ತರಗತಿಯಲ್ಲಿ ತೇರ್ಗಡೆಯಾದ ಮಹಮ್ಮದ್ ಶಿಫಾಝ್‍ನನ್ನು ಗೌರವಸಿಲಾಯಿತು.

ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ ಶಿಕ್ಷಕಿ ಸಪ್ನಾ ವಂದಿಸಿದರು ಶಿಕ್ಷಕಿ ಬಬಿತಾ ಸೆಲಿನ್ ಡಿ ‘ಸೋಜಾರವರು ಕಾರ್ಯಕ್ರಮ ನಿರೂಪಿಸಿದರು ಸಭಾ ಕ್ರಾರ್ಯಕ್ರಮ ನಂತರ ಶಾಲಾ ವಿದ್ಯಾರ್ಥಿಗಳಿಂದ ವನ ಮಹೋತ್ಸವದ ಬಗ್ಗೆ ರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .

Exit mobile version