Site icon Ullalavani

ಯುವವಾಹಿನಿ ಕೊಲ್ಯ ಘಟಕದಿಂದ ಅಭಯ ಆಶ್ರಮದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ

UN NETWORKS

ಕೊಣಾಜೆ: ಯುವವಾಹಿನಿ ಕೊಲ್ಯ ಘಟಕ ಇದರ ವತಿಯಿಂದ ಅಭಯ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮ ಕೊಣಾಜೆ ಅಸೈಗೋಳಿಯಲ್ಲಿರುವ ಅಭಯ ಆಶ್ರಮದಲ್ಲಿ ನಡೆಯಿತು.

ಆಶ್ರಮದ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಕಲಾವಿದರಿಂದ ಮನೊರಂಜನಾ ಕಾರ್ಯಕ್ರಮ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಘಟಕದ ಸದಸ್ಯ ದಂಪತಿಗಳಿಗೆ ಆಶ್ರಮದ ಹಿರಿಯರಿಂದ ಶುಭಹಾರೈಕೆ,ಆಶ್ರಮದ ಸದಸ್ಯರೊಂದಿಗೆ ಸಹಭೋಜನ ಹಾಗೂ ಕಾರ್ಯಕ್ರಮದ ಸವಿನೆನಪಿಗೆ ಆಶ್ರಮದ ವಠಾರದಲ್ಲಿ ಘಟಕದ ಸದಸ್ಯರು ಗಿಡ ನೆಡುವುದರೊಂದಿಗೆ ಮುಕ್ತಾಯಗೊಂಡಿತು.

ಕುಟುಂಬ ಮಿಲನ ಕಾರ್ಯಕ್ರಮಕ್ಕೆ ಅಭಯ ಆಶ್ರಯದ ಸಂಚಾಲಕ ಶ್ರೀನಾಥ್ ಹೆಗ್ಡೆ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅರೆಹೊಳೆ ಪ್ರತಿಷ್ಠಾನದ ರಂಗಸಂಚಾಲಕ ಜಯದೇವ್ ಕೊಲ್ಯ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ನಮಿತಾ ಶ್ಯಾಂ, ಬೆಂಗಳೂರು ಬಿಲ್ಲವ ಅಸೋಸಿಯೇಷನ್‍ನ ಸ್ಥಾಪಕ ಸದಸ್ಯ ವೆಂಕಟೇಶ್ ಟಿ., ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಬಿ.ಕೊಲ್ಯ ಭಾಗವಹಿಸಿದ್ದರು.

ಘಟಕದ ಅಧ್ಯಕ್ಷ ಕುಸುಮಾಕರ ಕುಂಪಲ ಸ್ವಾಗತಿಸಿದರು. ಸದಸ್ಯ ಭವಿಷ್ ಕಾರ್ಯಕ್ರಮ ನಿರೂಪಿಸಿದರು.

Exit mobile version