UN NETWORKS
ಉಳ್ಳಾಲ: ಇಸ್ಲಾಂ ಧರ್ಮ ನೆಲೆ ನಿಲ್ಲಬೇಕಾದರೆ ಧಾರ್ಮಿಕ ಶಿಕ್ಷಣ ನಿರಂತರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ತಾಜುಲ್ ಉಲಮಾ ಆರಂಭಿಸಿದ್ದ ಶರೀಅತ್ ಕಾಲೇಜು ಕೆಲವು ಸಮಯ ಬಳಿಕ ಮತ್ತೆ ಆರಂಭಿಸುವಲ್ಲಿ ದರ್ಗಾ ಸಮಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ಸಮಸ್ತ ಮುಶಾವರ ಆಧ್ಯಕ್ಷ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ಹೇಳಿದರು.ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಅಧೀನದಲ್ಲಿ ಸಯ್ಯಿದ್ ಮದನಿ ಅರೆಬಿಕ್ (ಶರೀಅತ್) ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅರೆಬಿಕ್ ಕಾಲೇಜಿನ ಪ್ರೊಫೆಸರ್ ಇಬ್ರಾಹಿಂ ಮದನಿ ಅಲ್ ಕಾಮಿಲ್, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಹಿಫ್ಝುಲ್ ಕುರಾನ್ ಕಾಲೇಜಿನ ಪ್ರಾಂಶುಪಾಲ ಹಾಫಿಝ್ ಝೈನ್ ಸಖಾಫಿ, ದಾಅವಾ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ವಳಚ್ಚಿಲ್, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗೈ, ಕೇಂದ್ರ ಜುಮಾ ಮಸೀದಿಯ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು, ಬಾವಾ ಮುಹಮ್ಮದ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಜತೆ ಕಾರ್ಯದರ್ಶಿ ಮೊಯ್ದೀನ್, ಅರೆಬಿಕ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಅಮೀರ್, ಕೋಶಾಧಿಕಾರಿ ಅಬ್ಬಾಸ್ ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು.
ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ ತೋಡಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ವಂದಿಸಿದರು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
‘ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಅಧೀನದಲ್ಲಿ ಕಲಿತವರು ಅಂತರಾಷ್ಟ್ರೀಯ ಮಟ್ಟದಲ್ಲೂ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ. ಅಪಪ್ರಚಾರದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ತೊಡಕಾಗಿದ್ದ ಸಂದರ್ಭ ಕಾಲೇಜು ಮುಚ್ಚುತ್ತದೆ ಎನ್ನುವ ಪ್ರಚಾರವೂ ನಡೆದಿತ್ತು. ಆದರೆ ಇದೀಗ ಮತ್ತೆ ಕಾಲೇಜ್ ಪುನರಾಂಭಿಸಲಾಗುತ್ತಿದೆ, ಕಾಲೇಜು ಮುನ್ನಡೆಸಲು ಯಾವುದೇ ತೊಂದರೆ ಇಲ್ಲ’
ಅಬ್ದುಲ್ ರಶೀದ್, ಅಧ್ಯಕ್ಷ ಕೇಂದ್ರ ಜುಮಾ ಮಸೀದಿ