ಬಿ.ಎ.ಮೊಯ್ದಿನ್, ಮಾನವೀಯತೆಯ ಪ್ರಬಲ ಪ್ರತಿಪಾದಕರಾಗಿದ್ದರು: ಫಾರೂಕ್ ಉಳ್ಳಾಲ್
UllalaVani
UN NETWORKS
ಮಂಗಳೂರು : ಪ್ರಾಮಾಣಿಕತೆ, ದಕ್ಷತೆ, ಮತ್ತು ಸಾಮಾಜಿಕ ಚಿಂತನೆಯ ಹಿರಿಯ ಮುತ್ಸದ್ಧಿ, ಮಾಜೀ ಸಚಿವ ಬಿ.ಎ.ಮೊಯ್ದಿನ್ ರ ನಿಧನ ಅಕಾಲಿಕ . ಅಭಿವೃದ್ಧಿ ಪರ ದೂರದೃಷ್ಠಿಯುಳ್ಳ ಅವರ ಮಾರ್ಗದರ್ಶನ ಸಾರ್ವಲಿಕ ಮೌಲ್ಯದಿಂದ ಕೂಡಿತ್ತು ಎಂದು ದ.ಕ.ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ಫಾರೂಕ್ ಉಳ್ಳಾಲ್ ವಿಶ್ಲೇಷಿಸಿದ್ದಾರೆ.
ಬಿ.ಎ. ಮೊಯ್ದಿನ್ ಸಾಹೇಬರ ಅಗಲಿಕೆ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅಪಾರ ನಷ್ಟವನ್ನುಂಟು ಮಾಡಿವೆ. ಮಾನವೀಯತೆ ಪ್ರಬಲ ಪ್ರತಿಪಾದಕರಾಗಿದ್ದ ಮೊಯ್ದಿನ್ ಸ್ನೇಹ ಜೀವಿಯಾಗಿದ್ದರು, ಕಿರಿಯರಿಗೆ ಸ್ಪೂರ್ತಿಯನ್ನು ತುಂಬುತ್ತಿದ್ದ ಮೊಯ್ದಿನ್ ರಾಜ್ಯಾದ್ಯಂತ ಜಾತ್ಯಾತೀತ ಮನುಸ್ಸುಳ್ಳ ಲಕ್ಷಾಂತರ ಜನರ ಪ್ರೀತಿಗೆ ಪಾತ್ರರಾದವರು. ರಾಜಕೀಯದಲ್ಲಿದ್ದರೂ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದವರೊಂದಿಗೆ ನಿಕಟ ಸ್ನೇಹವನ್ನಿಟ್ಟು ಕೊಂಡವರು. ಅವರ ಶಿಷ್ಯಂದಿರು ಮತ್ತು ಬೆಂಬಲಿಗರ ಪಾಲಿಗೆ,ಅನುಭವ-ಆದರ್ಶಗಳ ಮಹಾ ಸಾಗರದಂತಿದ್ದ ಬಿ.ಎ.ಮೊಯ್ದಿನ್, ಮಾನವೀಯತೆ ಪ್ರಬಲ ಪ್ರತಿಪಾದಕರಾಗಿದ್ದರು.
ಅವರ ಪಾರಮಾರ್ಥಿಕ ಬದುಕು ದೇವ ಸಂಪ್ರೀತಿಯನ್ನು ಗಳಿಸುವಂತಾಗಲಿ. ಅವರ ವಿದಾಯವನ್ನು ಸಹಿಸುವ ಶಕ್ತಿಯನ್ನೂಅವರ ಕುಟುಂಬ ವರ್ಗಕ್ಕೆ ದೇವರು ಅನುಗ್ರಹಿಸಲಿ ಎಂದೂ ಫಾರೂಕ್ ಉಳ್ಳಾಲ್ ಸಂತಾಪ ವ್ಯಕ್ತ ಪಡಿಸಿದ್ದಾರೆ.