Site icon Ullalavani

ಡಿವೈನ್ ಪ್ರಾರ್ಥನ ಮಂದಿರದ ಉದ್ಘಾಟನಾ ಸಮಾರಂಭ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಮನಸ್ಸಿಗೆ ಸಂತೋಷ, ನೆಮ್ಮದಿ ಸಾಂತ್ವಾನ ಕೇಳಲು. ದೇವರ ಬಜೀವಣತವಾದ ವಚನವನ್ನು ಆಲಿಸಲು ಈ ಧ್ಯಾನ ಮಂದಿರ ಆಶ್ರಯತಾಣವಾಗಿದ್ದು ಇದರ ಸದುಪಯೋಗವನ್ನು ಭಕ್ತಾಧಿಗಳು ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟುವಿನಲ್ಲಿ ಡಿವೈನ್ ಪ್ರಾರ್ಥನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ  ಇಂತಹ ಆಧ್ಯಾತ್ಮಿಕ ಕೇಂದ್ರದಿಂದ ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ನೂತನವಾಗಿ ಇದ್ಘಾಟನೆಗೊಂಡಿರುವ ಈ ಪ್ರಾರ್ಥನಾ ಕೇಂದ್ರ ಜನರ ಇಲ್ಲಿನ ಭಕ್ತರ ಆಶೋತ್ತರಗಳನ್ನು ಈಡೇರಿಸಲಿ ಎಂದರು.

ಕಾರ್ಯಕ್ರಮಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಮೊ.— ಡೇನಿಸ್ ಮೊರಾಸ್ ಪ್ರಭು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ, ಉದ್ಯಮಿ ರೋಹನ್ ಮೊಂತೇರೋ, ಪ್ರೊವೈನ್ಶಿಯಲ್ ಕೌನ್ಸಿಲರ್ ರೆ. ಫಾದರ್ ಪೌಲ್ ಪಾರೆಕಟ್ಟಿಲ್ ವಿ.ಸಿ., ಮೇರಿಮಾತಾ ಪ್ರೊವೈನ್ಸ್‍ನ ರೆ. ಡಾ. ಫಾದರ್ ಪೌಲ್ ಪುತುವಾ ವಿ.ಸಿ. ಉಪಸ್ಥಿತರಿದ್ದರು.

ತೊಕ್ಕೊಟ್ಟಿನ ಡಿವೈನ್ ಪ್ರಾರ್ಥನ ಮಂದಿರದ ನಿರ್ದೇಶಕ ಫಾ. ಜೋಸೆಫ್ ವನಿಯಮತರಾ ಸ್ವಾಗತಿಸಿದರು. ನ್ಯಾಷನಲ್ ಯೂತ್ ಡೈರೆಕ್ಟರ್ ದೆಹಲಿಯ ಫಾ. ಪ್ರಾಂಕ್ಲಿನ್ ಡಿ.ಸೋಜ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಡಿವೈನ್ ಸಂಟರ್‍ಗೆ ಸಂಪರ್ಕಿಸುವ 6 ಲಕ್ಷ ರೂ, ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟೀಕೃತ ರಸ್ತೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.

Exit mobile version