Site icon Ullalavani

ಪರಿಸರದ ಸಂರಕ್ಷಣೆ ಹಾಗೂ ಪೋಷಣೆ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ :ಪಿ. ಶ್ರೀಧರ್

UN NETWORKS

ಉಳ್ಳಾಲ: ಪರಿಸರದ ಸಂರಕ್ಷಣೆ ಹಾಗೂ ಪೋಷಣೆ ಕೇವಲ ಅರಣ್ಯ ಇಲಾಖೆಯ ಜವಬ್ದಾರಿ ಅಲ್ಲ ಬದಲಾಗಿ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ, ಇದಕ್ಕಾಗಿ ಸರಕಾರದ ವತಿಯಿಂದ ಪ್ರೋತ್ಸಾಹ ಧನವನ್ನು ಸಸಿ ನೆಡುವ ಪ್ರತಿಯೊಬ್ಬರಿಗೂ ಕೊಡಲಾಗುವುದು ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಅಭಿಪ್ರಾಯಪಟ್ಟರು.

ಭಾರತೀಯ ಕಥೋಲಿಕ್ ಯುವ ಸಂಚಲನ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು ಹಾಗೂ ಪೊಸಕುರಲ್ ಬಳಗ, ತೊಕ್ಕೊಟ್ಟು ಇವರು ಹಮ್ಮಿಕೊಂಡಿದ್ದ ತೊಕ್ಕೊಟ್ಟು ಒಳಪೇಟೆಯ ಆಂಬೇಡ್ಕರ್ ಮೈದಾನದಲ್ಲಿ ವನಮಹೋತ್ಸವ-ಉಚಿತ ಸಸಿ ವಿತರಣೆ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾನಾಡಿದರು.

ಅಧಕ್ಷತೆ ವಹಿಸಿದ್ದ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು ಇದರ ಸಹಾಯಕ ಧರ್ಮಗುರುಗಳಾದ ವಂ.ಫಾ| ಸ್ಟ್ಯಾನಿ ಪಿಂಟೊ ಮಾತನಾಡಿ, ಇಂತಹ ಸಾರ್ವಜನಿಕ ವನಮಹೋತ್ಸವ ಆಚರಣೆಯ ಮುಖಾಂತರ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗ್ರತಿ ಮೂಡಿಸುವುದೇ ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಆಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಇದರ ಅಧ್ಯಕ್ಷರಾದ ಯು.ಪಿ ಇಬ್ರಾಯಿಂ ಮಾತನಾಡಿ, ಸರಕಾರದಿಂದ ಒದಗುವ ಎಲ್ಲಾ ರೀತಿಯ ಪ್ರೋತ್ಸಾಹ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಪೊಸಕುರಲ್ ಬಳಗದ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಪೆರ್ಮನ್ನೂರು ಧರ್ಮಕೇಂದ್ರದ ಪಾಲನಾ ಮಂಡಳಿಯ ಉಪಾದ್ಯಕ್ಷ ಮೆಲ್ವಿನ್ ಸಿ. ಡಿ’ಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಐ.ಸಿ.ವೈ.ಯಂ ಪೆರ್ಮನ್ನೂರು ಘಟಕದ ಅಧ್ಯಕ್ಷ ಲ್ಯಾನ್ಸನ್ ಡಿ’ಸೋಜ, ಕಾರ್ಯದರ್ಶಿ ರಾಯನ್ ಡಿ’ಸೋಜ, ಸ್ತ್ರೀ ಸಚೇತಕಿ ಸಿ| ಸೆವ್ರಿನ್ ಫೆರ್ನಾಂಡಿಸ್, ಸಚೇತಕರಾದ ಡೆರಿಲ್ ಡಿಸೋಜ, ಐ.ಸಿ.ವೈ.ಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ನೊಯೆಲ್ ಡಿ.ಸೋಜ ಉಪಸ್ಥಿತರಿದ್ದರು.

ವೆಲಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಐ.ಸಿ.ವೈ.ಎಂ ಪೆರ್ಮನ್ನೂರು ಘಟಕದ ಅಧ್ಯಕ್ಷ ಲ್ಯಾನ್ಸನ್ ಡಿಸೋಜ ಸ್ವಾಗತಿಸಿ, ಕಾರ್ಯದರ್ಶಿ ರಾಯನ್ ಜೈಸನ್ ಡಿಸೋಜ ವಂದಿಸಿದರು.

Exit mobile version