Site icon Ullalavani

ಗುಣ ಮಟ್ಟದ ಶಿಕ್ಷಣದಿಂದ ಮನೆ,ಸಮಾಜಕ್ಕೆ ಮಾದರಿ : ಮುಬೀನ್ ಉಳ್ಳಾಲ್

UN NETWORKS

ಉಳ್ಳಾಲ: ಗುಣ ಮಟ್ಟದ ಶಿಕ್ಷಣ ಪಡೆಯುವುದರಿಂದ ಮನೆ ಸಮಾಜ ಎರಡಕ್ಕೂ ವಿದ್ಯಾರ್ಥಿಗಳು ಮಾದರಿಯಾಗಬಹುದು ಎಂದು ಡಾ| ಮುಬೀನ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಬಬ್ಬುಕಟ್ಟೆಯ ಹಿರಾ ನಗರದ ಹಿರಾ ಶಿಕ್ಷಣ ಸಂಸ್ಥೆಯಲ್ಲಿ 2017-18ರ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಅತಿಥಿಯಾಗಿ ಭಾಗವಹಿಸಿದ ಡೆಲ್ಟಾ ಕಂಪೆನಿಯ ವ್ಯವಸ್ಥಾಪಕ ಅಹ್ಮದ್ ಮೊೈದಿನ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅತೀ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನ್‍ನ ವ್ಯವಸ್ಥಾಪಕ ಅಧ್ಯಕ್ಷ ಕೆ.ಎಂ ಶರೀಫ್, ಅಧ್ಯಕ್ಷ ಅಬ್ದುಲ್‍ರಹಮಾನ್, ಸಂಚಾಲಕ ರಹಮತ್ತುಲ್ಲ, ಉಪಧ್ಯಾಕ್ಷ ಎ.ಹೆಚ್ ಮಹಮೂದ್, ಕಾರ್ಯದರ್ಶಿ ಅಬ್ದುಲ್‍ಕರೀಂ, ಖಜಾಂಚಿ ಅಬ್ದುಲ್‍ಖಾದರ್ ಹಾಗೂ ಟ್ರಸ್ಟಿನ ಸದಸ್ಯರು, ಹಿರಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.ಇಂಗ್ಲೀಷ್ ಉಪನ್ಯಾಸಕಿ ಅನಿತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Exit mobile version