Site icon Ullalavani

ಬಂಟರ ಭವನ ಉಳ್ಳಾಲ ವಲಯ ಬಂಟರ ಸಂಘದ ಪ್ರತೀಕ : ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು

UN NETWORKS

ಉಳ್ಳಾಲ: ಉಳ್ಳಾಲ ವಲಯ ಬಂಟರ ಸಂಘದಿಂದ ನೂತನವಾಗಿ ನಿರ್ಮಾಣಗೊಂಡಿರುವ `ಬಂಟರ ಭವನ’ ಒಂದು ಹೆಮ್ಮೆಯ ಪ್ರತೀಕವಾಗಿದ್ದು ಭವನ ನಿರ್ಮಾಣದಿಂದ ಸಂಘದ ಗರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಅಭಿಪ್ರಾಯಪಟ್ಟರು. ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ಬಂಟರ ಸಂಘ ಉಳ್ಳಾಲ ವಲಯ ಇದರ ಹದಿನೇಳನೆ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಂಟರ ಭವನ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮಹತ್ವದ್ದು, ಭವನ ನಿರ್ಮಾಣಕ್ಕೆ ಪ್ರಾರಂಬಿಕ ಹಂತದಿಂದ ಉತ್ತಮ ರೀತಿಯಲ್ಲಿ ಸಹಕಾರ ಸಿಕ್ಕಿದ್ದು, ಉಳ್ಳಾಲ ವಲಯದ ಸಮಾಜ ಬಾಂಧವರೊಂದಿಗೆ ಮುಂಬೈ ಅದರಲ್ಲೂ ಪೂನಾದವರ ಸಹಕಾರ ಅತೀ ದೊಡ್ಡದ್ದು. ಬಂಟರ ಸಂಘದ ಅಧ್ಯಕ್ಷತೆಯೊಂದಿಗೆ ಕಟ್ಟಡ ನಿರ್ಮಾಣಕ್ಕೆ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿದ ಯುವ ನಾಯಕ ಜಿತೇಂದ್ರ ಶೆಟ್ಟಿ ಮತ್ತು ಅವರ ನೇತೃತ್ವದ ತಂಡ ಮತ್ತು ಕಟ್ಟಡ ಸಮಿತಿಯ ಎಲ್ಲಾ ಪದಾ„ಕಾರಿಗಳ ಕಾರ್ಯ ಶ್ಲಾಘನೀಯ ಎಂದ ಭವನ ನಿರ್ಮಾಣದೊಂದಿಗೆ ನಮ್ಮ ಜವಾಬ್ದಾರಿ ಮುಗಿದಿಲ್ಲ. ಅದನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವುದರೊಂದಿಗೆ ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಮುಖ್ಯವಾಗಿ ಸಮಾಜ ಬಾಂಧವರು ತಮ್ಮಲ್ಲಿರುವ ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆದಾಗ ಸಮಾಜ ಅಭಿವೃದ್ಧಿಯೊಂದಿಗೆ ವ್ಯಕ್ತಿಗತ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ಉಳ್ಳಾಲ ವಲಯ ಬಂಟರ ಸಂಘ ಸದೃಡವಾಗಿದೆ. ಕಳೆದ ಎರಡು ವರ್ಷದಲ್ಲಿ ಸಂಘ ವಿನೂತನ ರೀತಿಯಲ್ಲಿ ಚಟುವಟಿಕೆ ನಡೆಸುವಲ್ಲಿ ಯಶಸ್ವಿಯಾಗಿದೆ. ಸಂಘಕ್ಕೆ ಇನ್ನಷ್ಟು ಹೊಸ ಮುಖಗಳನ್ನು ಪರಿಚಯಿಸುವ ಕಾರ್ಯ ಆಗಬೇಕು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸುವ ಯುವಜನರನ್ನು ಸಂಘಟಿಸುವ ಕಾರ್ಯ ಆಗಬೇಕು ಎಂದರು.
ಸಭೆಯಲ್ಲಿ ಬಂಟರ ಸಂಘ ಉಳ್ಳಾಲ ವಲಯ ಉಪಾಧ್ಯಕ್ಷರಾದ ಶ್ರೀಕರ್ ಶೆಟ್ಟಿ ಬೋಳ್ಯಾರು, ಚಿತ್ರಾ ಜಿ. ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ ಹೊಸಮನೆ, ಜೊತೆ ಕಾರ್ಯದರ್ಶಿ ಅಶೋಕ್ ರೈ ಮಡ್ಯಾರ್, ಜೊತೆಕಾರ್ಯದರ್ಶಿ ನಾರಾಯಣ ರೈ ಕಕ್ಕೆಮಜಲ್,ಸಿರಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರಾದ ಶೆಟ್ಟಿ ಉಳ್ಳಾಲ, ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಭಟ್ನಗರ ಉಪಸ್ಥಿತರಿದ್ದರು.

ಪ್ರ. ಕಾರ್ಯದರ್ಶಿ ಮೋಹನ್‍ದಾಸ್ ಗಾಂಭೀರ್ ಬೋಳ್ಯಾರುಗುತ್ತು ಸಂಘದ ವರದಿ ವಾಚಿಸಿದರು. ಸಂಘದ ಲೆಕ್ಕಪತ್ರಮಂಡನೆಯನ್ನು ಕೋಶಾ„ಕಾರಿ ಪುರುಷೋತ್ತಮ ಮಾಣಾೈ, ಕಟ್ಟಡ ಸಮಿತಿಯ ಲೆಕ್ಕಪತ್ರವನ್ನು ಸಂಜೀವ ಶೆಟ್ಟಿ ಕಟ್ಟಡ ಸಮಿತಿ ಲೆಕ್ಕಪತ್ರ ಕಟ್ಟಡ ಸಮಿತಿ ಕೋಶಾಧಿಕಾರಿ ಸಂಜೀವ ಶೆಟ್ಟಿ ಪಡ್ಯಾರಮನೆ ಮಂಡಿಸಿದರು. ಕಟ್ಟಡ ಸಮಿತಿಯ ವರದಿಯನ್ನು ಕೆ. ರವೀಂದ್ರ ರೈ ಕಲ್ಲಿಮಾರು ವಾಚಿಸಿದರು.ಸಭೆಯಲ್ಲಿ 14 ಗ್ರಾಮಗಳ ಅಧ್ಯಕ್ಷರು, ಪದಾಧಿಕಾರಿಗಳು, ಉಳ್ಳಾಲ ಬಂಟರ ಸಂಘದ ಪದಾಧಿಕಾರಿಗಳು, ಕಟ್ಟಡ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version