Site icon Ullalavani

ಸಾಮಾಜಿಕ ಬದ್ಧತೆಯೊಂದಿಗೆ ಬಸ್ಸು ತಂಗುದಾಣ ನಿರ್ಮಾಣ : ಸೌಂದರ್ಯ ರಮೇಶ್

UN NETWORKS

ಸೋಮೇಶ್ವರ: ಸಾರ್ವಜನಿಕ ಶಾರದೋತ್ಸವ ಸಮಿತಿಯ ಕೋರಿಕೆಯ ಮೇರೆಗೆ ಕೊಲ್ಯದಲ್ಲಿ ಬಸ್ಸಿಗಾಗಿ ಕಾಯುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಸಿಲು ಮಳೆಯಿಂದ ಆಗುವ ಸಮಸ್ಯೆಯನ್ನು ಗಮನಿಸಿ, ಸಾಮಾಜಿಕ ಬದ್ಧತೆಯೊಂದಿಗೆ ಬಸ್ಸು ತಂಗುದಾಣ ನಿರ್ಮಿಸುತ್ತಿದ್ದು ಇದರ ಸದುಪಯೋಗ ಎಲ್ಲರೂ ಪಡೆದಯುವಂತಾಗಬೇಕು ಎಂದು ಉದ್ಯಮಿ ಸೌಂದರ್ಯ ರಮೇಶ್ ಅಭಿಪ್ರಾಯಪಟ್ಟರು.

ಸೋಮೇಶ್ವರ ಗ್ರಾಮದ ಫ್ರಥಮ ಕೊಲ್ಯ ಹೆದ್ದಾರಿ ಪಕ್ಕದಲ್ಲಿ ಓಂ ಸಾಯಿ ಸೌಂದರ್ಯ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ತಾತ್ಕಾಲಿಕ ಬಸ್ಸು ತಂಗುದಾಣದ ಗುದ್ದಲಿ ಪೂಜೆಯನ್ನು ಉದ್ಯಮಿ ಸೌಂದರ್ಯ ರಮೇಶ್ ನೆರವೇರಿಸಿದರು.

ಬಸ್ಸಿಗಾಗಿ ಕಾಯುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಸಿಲು ಮಳೆಯಿಂದ ಆಗುವ ಸಮಸ್ಯೆಯನ್ನು ಗಮನಿಸಿ, ಸಾರ್ವಜನಿಕ ಶಾರದೋತ್ಸವ ಸಮಿತಿಯ ಕೋರಿಕೆ ಮೇರೆಗೆ ದಾನಿಗಳಿಂದ ಈ ಕೊರತೆ ನೀಗಿಸಲಾಗುತ್ತಿದೆ.

ಶಾರದಾ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಅಧ್ಯಕ್ಷ ಯಶೋಧರ ಕೊಲ್ಯ ಭಾಗವಹಿಸಿದ್ದರು. ತೋನ್ಸೆ ಪುಷ್ಕಳ್ ಕುಮಾರ್ ಪ್ರಾಯೋಜಕರನ್ನು ಸ್ವಾಗತಿಸಿ ಅಭಿನಂದಿಸಿದರು. ಪ್ರಕಾಶ್ ಎಚ್. ಧಾರ್ಮಿಕ ಪ್ರಕ್ರಿಯೆ ನಡೆಸಿಕೊಟ್ಟರು.

ಮೋಹನ್ ಶೆಟ್ಟಿ, ಉಮೇಶ್ ಕುಲಾಲ್, ರಮೇಶ್ ಕೊಲ್ಯ, ರಾಜೇಶ್ ಉಚ್ಚಿಲ್, ವಿಶ್ವನಾಥ್ ಕೊಲ್ಯ, ರಾಜೇಶ್ ಕೆ., ಹರೀಶ್ ಕೊಲ್ಯ, ಮಹೇಶ್ ಕೊಲ್ಯ, ಪದ್ಮನಾಭ, ಎಡ್ವರ್ಡ್ ಲೋಬೋ, ಶಶಿಕಾಂತ್ ಮತ್ತಿತ್ತರರು ಉಪಸ್ಥಿತರಿದ್ದರು.

Exit mobile version