Site icon Ullalavani

ಪರಂಡೆಯಲ್ಲಿ ಅಪಾಯಕಾರಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬ

UN NETWORKS

ಕೊಣಾಜೆ: ಕೊಣಾಜೆ ಗ್ರಾಮದ ಬೆಳ್ಮ ಪರಂಡೆಯ ಬಳಿ ರಸ್ತೆಯ ಬದಿಯಲ್ಲಿಯೇ ಇರುವ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬವೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೊಣಾಜೆಯಿಂದ ಬೆಳ್ಮ ಪರಂಡೆಯವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ನೂತನ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ತಗ್ಗು ಪ್ರದೇಶಗಳನ್ನು ಎತ್ತರಗೊಳಿಸಲಾಗಿತ್ತು. ಅದರಂತೆ ಪರಂಡೆಯ ಬಳಿಯೂ ತಗ್ಗು ರಸ್ತೆಯನ್ನು ಮಣ್ಣುಹಾಕಿ ಎತ್ತರಗೊಳಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಅಲ್ಲೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬವನ್ನು ಹಾಗೇಯೇ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ರಸ್ತೆ ಎತ್ತರವಾಗಿ ನಿರ್ಮಾಣವಾದ ಕಾರಣ ಕಂಬದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಸಂಪರ್ಕದ ವಿದ್ಯುತ್ ತಂತಿಯು ರಸ್ತೆ ಬದಿಯಲ್ಲಿ ಸಂಚರಿಸುವವರಿಗೆ ಕೈಗೆಟಕುವಂತಿದೆ. ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ನಿತ್ಯ ಸಂಚರಿಸುತ್ತಿದ್ದು ಅವಘಡ ಸಂಭವಿಸುವ ಮುನ್ನ ಮೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

Exit mobile version